ಪ್ರೀತಿ ಜೀವನವನ್ನು ಮತ್ತಷ್ಟು ರೋಮ್ಯಾಂಟಿಕ್ ಮತ್ತು ಸುಖಕರ ಮಾಡಲು ಫೆಂಗ್ ಶುಯಿ ಉಪಾಯ ಸಹಾಯವಾಗಲಿದೆ. ಫೆಂಗ್ ಶುಯಿ ಚೀನಾ ವಾಸ್ತುಶಾಸ್ತ್ರವಾಗಿದ್ದು, ಇದು ನಕಾರಾತ್ಮಕ ಶಕ್ತಿಯನ್ನು ಹೊರಹಾಕಿ, ಸಕಾರಾತ್ಮಕ ಶಕ್ತಿ ವೃದ್ಧಿಗೆ ನೆರವಾಗುತ್ತದೆ.
ಪ್ರೀತಿ ಜೀವನವನ್ನ ದುಪ್ಪಟ್ಟು ಮಾಡಲು ಮನೆಯಲ್ಲಿ ಎಂದೂ ಮುಳ್ಳಿನ ಗಿಡವನ್ನು ಇಡಬಾರದು. ಫೆಂಗ್ ಶುಯಿ ಪ್ರಕಾರ ಮುಳ್ಳು ಗಿಡ ಮನೆಯಲ್ಲಿದ್ದರೆ, ನಕಾರಾತ್ಮಕ ಶಕ್ತಿ ಮನೆ ಪ್ರವೇಶ ಮಾಡುತ್ತದೆ. ಇದ್ರಿಂದ ಸಂಬಂಧ ಹಾಳಾಗುತ್ತದೆ.
ಬೆಡ್ ರೂಮಿನಲ್ಲಿ ಫೆಂಗ್ ಶುಯಿ ಪಾತರಗಿತ್ತಿಯನ್ನಿಡಿ. ಇದು ನೀಲಿ ಕಲ್ಲಿನಿಂದ ಮಾಡಿದ್ದಾಗಿರಲಿ.
ಫೆಂಗ್ ಶುಯಿ ಪ್ರಕಾರ ಮನೆಯಲ್ಲಿ ಬೇಡದ ವಸ್ತುಗಳು ಸಂಗ್ರಹವಾಗದಂತೆ ನೋಡಿಕೊಳ್ಳಿ. ಮನೆಯಲ್ಲಿ ಇರುವ ಹಾಳಾದ ವಸ್ತುಗಳು ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತವೆ. ಹಾಗಾಗಿ ವಾರಕ್ಕೊಮ್ಮೆ ಮನೆಯಲ್ಲಿರುವ ಬೇಡದ ವಸ್ತುಗಳನ್ನು ಹೊರಗೆ ಹಾಕುತ್ತಿರಿ.
ಮನೆಯಲ್ಲಿ ಸದಾ ಸಂತೋಷ, ಸುಖ ನೆಲೆಸಬೇಕಾದ್ರೆ ಮನೆಯಲ್ಲಿ ಲಾಫಿಂಗ್ ಬುದ್ಧನನ್ನು ಇಡಿ. ಜೊತೆಗೆ ಲವ್ ಬರ್ಡ್ ಸೇರಿದಂತೆ ಪ್ರೀತಿಯ ಸಂಕೇತದ ವಸ್ತುಗಳನ್ನು ಇಡಿ. ಇದ್ರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ.
ಪತಿ-ಪತ್ನಿ ಮಧ್ಯೆ ಪ್ರೀತಿ ಹೆಚ್ಚಾಗಲು ಮನೆಯಲ್ಲಿ ಶಂಖವನ್ನಿಡಿ.