ತಣ್ಣನೆ ಗಾಳಿ, ಮೈಸೋಕುವ ಮಂಜು, ಮೈಕೊರಿಯುವ ಚಳಿ, ಆಹ್ಲಾದಕರವೆನಿಸುವ ಚಳಿಗಾಲ ಬಹುತೇಕರಿಗೆ ಪ್ರಿಯ. ಆದ್ರೆ ಫ್ಯಾಷನ್ ವಿಷ್ಯದಲ್ಲಿ ಚಳಿಗಾಲ ಒಳ್ಳೆಯದಲ್ಲ. ಆಕರ್ಷಕ ಸ್ಕರ್ಟ್, ಸಣ್ಣ ಡ್ರೆಸ್ ಧರಿಸೋದು ಚಳಿಗಾಲದಲ್ಲಿ ಕಷ್ಟ. ಚಳಿಗಾಲದಲ್ಲಿಯೂ ಆಕರ್ಷಕವಾಗಿ ಕಾಣಬೇಕೆಂದ್ರೆ ಕೆಲವೊಂದು ಟಿಪ್ಸ್ ಅನುಸರಿಸಿ.
ಚಳಿಗಾಲದಲ್ಲಿ ಮೆಟಾಲಿಕ್ಸ್ ಆಯ್ಕೆಗೆ ಹಿಂದೇಟು ಹಾಕಬೇಡಿ. ಚಳಿಗಾಲದಲ್ಲಿ ಮೆಟಾಲಿಕ್ಸ್ ಗೆ ಬೇಡಿಕೆ ಹೆಚ್ಚಿರುತ್ತದೆ. ಸರಳವಾದ ಬೂಟ್ ಜೊತೆ ಇದನ್ನು ಧರಿಸಬಹುದು.
ಚಳಿಗಾಲದಲ್ಲಿ ಮೈತುಂಬ ಬಟ್ಟೆ ಧರಿಸಿದ್ರೆ ಒಳ್ಳೆಯದು. ಬಗೆ ಬಗೆ ವಿನ್ಯಾಸದ ಜಾಕೆಟ್, ಪ್ಯಾಟ್-ಸೂಟ್ ಚಳಿಗಾಲಕ್ಕೆ ಬೆಸ್ಟ್.
ಚಳಿಗಾಲದಲ್ಲಿ ಬೂಟ್ ಎಲ್ಲರ ಅಚ್ಚುಮೆಚ್ಚು. ಕೌಬಾಯ್ ಬೂಟ್ ಚಳಿಗಾಲಕ್ಕೆ ಬೆಸ್ಟ್. ಮಾರುಕಟ್ಟೆಯಲ್ಲಿ ವೆರೈಟಿ ಬೂಟ್ ಗಳು ಸಿಗುತ್ತವೆ. ಪ್ಯಾಂಟ್, ಸ್ಕರ್ಟ್, ಲೆಗ್ಗಿನ್ಸ್ ಸೇರಿದಂತೆ ಎಲ್ಲದಕ್ಕೂ ಹೊಂದುವ ಬೂಟ್ ಆಯ್ಕೆ ಮಾಡಿಕೊಂಡರೆ ಒಳ್ಳೆಯದು.
ಹಿಂದೆ ಹೇಳಿದಂತೆ ಚಳಿಗಾಲದಲ್ಲಿ ಹೆಚ್ಚು ಬಟ್ಟೆ ಧರಿಸಬೇಕಾಗುತ್ತದೆ. ಇದು ನಿಮ್ಮ ಫ್ಯಾಷನ್ ಗೆ ಅಡ್ಡಿಯಾಗಬಹುದು. ಚಳಿಗಾಲದಲ್ಲಿ ಸೀರೆ ಉಡುವುದು ಕಷ್ಟ ಎನ್ನುವವರಿದ್ದಾರೆ. ಆದ್ರೆ ಬೆಚ್ಚಗಿರುವ ಜೊತೆ ಸೀರೆಯಲ್ಲಿ ಫ್ಯಾಷನ್ ತೋರಿಸಬಹುದು. ಬ್ಲೌಸ್ ಬದಲು ಬಟನ್ ಇರುವ ಸ್ವೆಟರನ್ನು ನೀವು ಹಾಕಬಹುದು. ಇದು ನಿಮ್ಮ ಸೌಂದರ್ಯವನ್ನು ಹೆಚ್ಚಿಸುತ್ತದೆ. ಇಲ್ಲವಾದ್ರೆ ಸುಂದರ ಲೆದರ್ ಜಾಕೆಟ್ ಧರಿಸಬಹುದು. ಚಳಿಗಾಲದಲ್ಲಿ ನಿಮ್ಮ ಬಳಿ ಅವಶ್ಯಕವಾಗಿ ಲೆದರ್ ಜಾಕೆಟ್ ಇರಲಿ.