ಹಿಂದೂ ಧರ್ಮದಲ್ಲಿ ಅನೇಕ ಪರಂಪರೆಗಳಿವೆ. ಕೆಲವೊಂದು ಪದ್ಧತಿಗಳು ಜನನಕ್ಕಿಂತ ಮೊದಲೇ ಮಾಡಲಾಗುತ್ತದೆ. ಅದ್ರಲ್ಲಿ ಸೀಮಂತ ಕೂಡ ಒಂದು. ಸೀಮಂತದಿಂದ ಹುಟ್ಟುವ ಮಗುವಿಗೆ ಅನೇಕ ಲಾಭಗಳಿವೆ.
ಸೀಮಂತವನ್ನು ಹುಟ್ಟುವ ಮಕ್ಕಳ ಉತ್ತಮ ಆರೋಗ್ಯಕ್ಕಾಗಿಯೇ ಮಾಡಲಾಗುತ್ತದೆ. ಈ ವೇಳೆ ಮಾಡುವ ವಿಶೇಷ ಪೂಜೆಯಿಂದ ಗರ್ಭಾಶಯದ ದೋಷ ನಿವಾರಣೆಯಾಗುತ್ತದೆ ಅಥವಾ ಕಡಿಮೆಯಾಗುತ್ತದೆ ಎಂದು ನಂಬಲಾಗಿದೆ.
ಇನ್ನು ಸೀಮಂತದ ವೇಳೆ ಹಣ್ಣು ಹಾಗೂ ಒಣ ಹಣ್ಣುಗಳನ್ನು ನೀಡಲಾಗುತ್ತದೆ. ಆರಂಭದಲ್ಲಿ ಒಣ ಹಣ್ಣುಗಳನ್ನು ಸೇವಿಸಲು ಸಾಧ್ಯವಾಗದವರು ಸೀಮಂತದ ವೇಳೆ ಅಗತ್ಯವಾಗಿ ಸೇವನೆ ಮಾಡ್ತಾರೆ. ಹಣ್ಣು ಹಾಗೂ ಒಣ ಹಣ್ಣುಗಳು ಪೌಷ್ಟಿಕದಿಂದ ಕೂಡಿರುತ್ತವೆ. ಸೀಮಂತದ ವೇಳೆ ಗರ್ಭಿಣಿಗೆ ಹಣ್ಣು ಹಾಗೂ ಒಣ ಹಣ್ಣುಗಳನ್ನು ನೀಡಲಾಗುತ್ತದೆ. ಇದು ಮಕ್ಕಳು ಆರೋಗ್ಯವಾಗಿರಲು ಕಾರಣವಾಗುತ್ತದೆ. ಒಣ ಹಣ್ಣಿನಲ್ಲಿ ಪ್ರೋಟಿನ್ ಅಂಶ ಹೆಚ್ಚಿದ್ದು, ಗರ್ಭದಲ್ಲಿರುವ ಮಗುವಿಗೆ ಇದ್ರ ಅಗತ್ಯತೆ ಹೆಚ್ಚಿರುತ್ತದೆ.
ಹಣ್ಣುಗಳು ದೇಹದ ಶಕ್ತಿಯನ್ನು ಹೆಚ್ಚಿಸುತ್ತವೆ. ಇದ್ರಲ್ಲಿರುವ ಎಣ್ಣೆ ಗುಣ ಹೆರಿಗೆ ವೇಳೆ ನೋವನ್ನು ಕಡಿಮೆ ಮಾಡುತ್ತದೆ. ಜೊತೆಗೆ ಆರೋಗ್ಯಕರ ಮಗು ಜನನಕ್ಕೆ ನೆರವಾಗುತ್ತದೆ.