alex Certify ಪಿತೃಗಳ ಶ್ರಾದ್ಧದ ತಿಥಿ ನೆನಪಿಲ್ಲವಾದ್ರೆ ಈ ದಿನ ಮಾಡಿ ಶ್ರಾದ್ಧ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಿತೃಗಳ ಶ್ರಾದ್ಧದ ತಿಥಿ ನೆನಪಿಲ್ಲವಾದ್ರೆ ಈ ದಿನ ಮಾಡಿ ಶ್ರಾದ್ಧ

ಪಿತೃಗಳ ಆತ್ಮಶಾಂತಿಗಾಗಿ ಶ್ರಾದ್ಧವನ್ನು ಮಾಡಲಾಗುತ್ತದೆ. ಆದ್ರೆ ಪೂರ್ವಜರೆಲ್ಲರ ಮರಣದ ದಿನ, ತಿಥಿಯನ್ನು ನೆನಪಿಟ್ಟುಕೊಳ್ಳಲು ಸಾಧ್ಯವಿಲ್ಲ. ಹಾಗಾಗಿ ಪಿತೃ ಪಕ್ಷದ ಅಮವಾಸ್ಯೆ ಅಂದ್ರೆ ಮಹಾಲಯ ಅಮವಾಸ್ಯೆಯಂದು ಶ್ರಾದ್ಧ ಮಾಡಬೇಕು. ಪೂರ್ವಜರನ್ನು ನೆನೆದು ಮಾಡುವ ಶ್ರಾದ್ಧದಿಂದ ಪೂರ್ವಜರ ಆತ್ಮ ತೃಪ್ತಿಯಾಗಿ ಸುಖ-ಶಾಂತಿ ಸಿಗುತ್ತದೆ.

ಮಹಾಲಯ ಅಮವಾಸ್ಯೆಯಂದು ಬ್ರಾಹ್ಮಣರನ್ನು ಕರೆದು ಪದ್ಧತಿ ಪ್ರಕಾರ ಶ್ರಾದ್ಧ ಮಾಡಬೇಕು. ಶ್ರಾದ್ಧ ಮಾಡಲು ಉತ್ತಮ ಸಮಯ ಮಧ್ಯಾಹ್ನ. ಬ್ರಾಹ್ಮಣರಿಗೆ ದಾನವನ್ನು ಮಾಡಬೇಕು. ಪಿತೃಪಕ್ಷದ ಪ್ರತಿಯೊಂದು ದಿನ ಪ್ರತಿಯೊಬ್ಬ ಪೂರ್ವಜರಿಗೆ ಶ್ರಾದ್ಧ ಮಾಡುವ ಪದ್ಧತಿಯಿದೆ. ಇದನ್ನು ಮಾಡಲು ಸಾಧ್ಯವಾಗದವರು ಪಿತೃಪಕ್ಷದ ಅಮವಾಸ್ಯೆಯಂದು ಶ್ರಾದ್ಧವನ್ನು ಅವಶ್ಯಕವಾಗಿ ಮಾಡಬೇಕು.

ಶಾಸ್ತ್ರಗಳ ಪ್ರಕಾರ, ಅಶ್ವತ್ಥ ಮರದ ಪೂಜೆ ಮಾಡುವುದ್ರಿಂದ ಪೂರ್ವಜರು ತೃಪ್ತರಾಗ್ತಾರಂತೆ. ಈ ದಿನ ಸ್ಟೀಲ್ ಲೋಟದಲ್ಲಿ ಹಾಲು, ನೀರು, ಕಪ್ಪು ಎಳ್ಳು, ಜೇನುತುಪ್ಪವನ್ನು ಹಾಕಿ. ಇದ್ರ ಜೊತೆ ಬಿಳಿ ಬಣ್ಣದ ಸಿಹಿ, ಕೆಲ ನಾಣ್ಯವನ್ನು ಅಶ್ವತ್ಥ ಮರದ ಕೆಳಗೆ ಇಡಿ. ಎಲ್ಲ ಮಿಶ್ರಣವನ್ನು ಮರದ ಕೆಳಗೆ ಹಾಕಿ ಓಂ ಸರ್ವ್ ಪಿತೃ ದೇವತಾಭ್ಯೋ ನಮಃ ಮಂತ್ರವನ್ನು ಜಪಿಸಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...