ಮನೆಯಲ್ಲೇ ಮಾಡಿ ಪನ್ನೀರ್ ಪಸಂದ್

ದೊಡ್ಡವರಿಂದ ಹಿಡಿದು ಮಕ್ಕಳವರೆಗೆ ಎಲ್ಲರೂ ಪನ್ನೀರ್ ಇಷ್ಟಪಡ್ತಾರೆ. ಪಾಲಕ್ ಪನ್ನೀರ್, ಮಟರ್ ಪನ್ನೀರ್ ತಿನ್ನೋದು ಸಾಮಾನ್ಯ. ಆದ್ರೆ ಇದನ್ನು ತಿಂದು ಬೋರ್ ಆಗಿದ್ರೆ ಇಂದು ಪನ್ನೀರ್ ಪಸಂದ್ ಮಾಡಿ ರುಚಿ ನೋಡಿ.

ಪನ್ನೀರ್ ಪಸಂದ್ ಮಾಡಲು ಬೇಕಾಗುವ ಪದಾರ್ಥ :

ಪನ್ನೀರ್ – 250 ಗ್ರಾಂ

ಬೆಳ್ಳುಳ್ಳಿ -5-6 ಮೊಗ್ಗು

ಶುಂಠಿ – 1-2  ಸಣ್ಣ ಚೂರು

ಈರುಳ್ಳಿ – 2 (ಉದ್ದವಾಗಿ ಕತ್ತರಿಸಿದ್ದು)

ಟೋಮ್ಯಾಟೋ – 3 (ಕತ್ತರಿಸಿದ್ದು)

ಹಸಿರು ಮೆಣಸಿನಕಾಯಿ – 1

ಕರಿಬೇವಿನ ಸೊಪ್ಪು -5-6 ಎಲೆ

ದೊಡ್ಡ ಏಲಕ್ಕಿ – 2

ಗೋಡಂಬಿ – 6-7

ಕೆಂಪು ಮೆಣಸಿನ ಪುಡಿ – 1/2 ಟೀಸ್ಪೂನ್

ಅರಿಶಿನ ಪುಡಿ – 1/4 ಟೀಸ್ಪೂನ್

ಮಸಾಲಾ ಪುಡಿ – 1/4 ಟೀಸ್ಪೂನ್

ಕಸೂರಿ ಮೇಥಿ – 1/2 ಟೀಸ್ಪೂನ್

ಕೊತ್ತಂಬರಿ, ಜೀರಿಗೆ ಪುಡಿ -1 ಚಮಚ

ತಾಜಾ ಕೆನೆ – 1/2 ಕಪ್

ನೀರು – 1/2 ಟೀಸ್ಪೂನ್

ಉಪ್ಪು –ರುಚಿಗೆ ತಕ್ಕಷ್ಟು

ಎಣ್ಣೆ – 3 ಚಮಚ

 ಪನ್ನೀರ್ ಪಸಂದ್ ಮಾಡುವ ವಿಧಾನ :

ಗೋಡಂಬಿ ಬೀಜವನ್ನು ಮಿಕ್ಸಿಗೆ ಹಾಕಿ ಪುಡಿ ಮಾಡಿಕೊಳ್ಳಿ. ಅದಕ್ಕೆ ನೀರನ್ನು ಹಾಕಿ ಪೇಸ್ಟ್ ಮಾಡಿಕೊಳ್ಳಿ. ನಂತ್ರ ಹಸಿರು ಮೆಣಸಿನಕಾಯಿ, ಬೆಳ್ಳುಳ್ಳಿ, ಶುಂಠಿಯನ್ನು ಮಿಕ್ಸಿಗೆ ಹಾಕಿ ಪೇಸ್ಟ್ ಮಾಡಿಕೊಳ್ಳಿ.

ನಂತ್ರ ಈರುಳ್ಳಿ ಹಾಗೂ ಟೋಮೋಟೋವನ್ನು ಕೂಡ ಬೇರೆ ಬೇರೆಯಾಗಿ ಮಿಕ್ಸಿಗೆ ಹಾಕಿ ಪೇಸ್ಟ್ ಮಾಡಿಕೊಳ್ಳಿ.

ಪನ್ನೀರನ್ನು ಚೌಕಾಕಾರದಲ್ಲಿ ಕತ್ತರಿಸಿ. ನಂತ್ರ ಅದನ್ನು ಮತ್ತೆ ತ್ರಿಕೋಣದಲ್ಲಿ ಎರಡು ಪೀಸ್ ಮಾಡಿ. 2, 1/2 ಚಮಚ ಎಣ್ಣೆಯನ್ನು ಪಾತ್ರೆಗೆ ಹಾಕಿ ಬಿಸಿ ಮಾಡಿ. ಎಣ್ಣೆಗೆ ಕತ್ತರಿಸಿ ಪನ್ನೀರ್ ಹಾಕಿ ಸ್ವಲ್ಪ ಕೆಂಪಾಗುವವರೆಗೆ ಬಿಡಿ. ಎಣ್ಣೆಯಿಂದ ತೆಗೆದು ನ್ಯಾಪ್ಕಿನ್ ಮೇಲಿಡಿ.

ಮತ್ತೊಂದು ಚಮಚ ಎಣ್ಣೆಯನ್ನು ಪಾತ್ರೆಗೆ ಹಾಕಿ. ಅದಕ್ಕೆ ಈರುಳ್ಳಿ, ಟೋಮೋಟೋ, ಬೆಳ್ಳುಳ್ಳಿ ಹಾಗೂ ಗೋಡಂಬಿ ಪೇಸ್ಟ್ ಹಾಕಬೇಕು. ಒಂದೊಂದು ಪೇಸ್ಟ್ ಹಾಕಿದ ಮೇಲೆ 2 ನಿಮಿಷ ಚೆನ್ನಾಗಿ ಹುರಿಯಿರಿ. ನಂತ್ರ ಕೆಂಪು ಮೆಣಸಿನ ಪುಡಿ, ಅರಿಶಿನ ಪುಡಿ, ಗರಂ ಮಸಾಲಾ ಪೌಡರ್, ದನಿಯಾ ಪುಡಿ ಹಾಗೂ ನೀರನ್ನು ಹಾಕಿ ಒಂದು ನಿಮಿಷ ಬೇಯಲು ಬಿಡಿ. ನಂತ್ರ ಕಸೂರಿ ಮೇಥಿ, ಪನ್ನೀರ್ ಹಾಕಿ 5-6 ನಿಮಿಷ ಬೇಯಿಸಿ.

ನಂತ್ರ ಗ್ಯಾಸ್ ಬಂದ್ ಮಾಡಿ, ಅದ್ರ ಮೇಲೆ ಕತ್ತರಿಸಿದ ಕೊತ್ತಂಬರಿ ಸೊಪ್ಪನ್ನು ಹಾಕಿ ಸರ್ವ್ ಮಾಡಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read