ಸೌತೆಕಾಯಿ ಸಾಮಾನ್ಯವಾಗಿ ಎಲ್ಲರಿಗೂ ಇಷ್ಟವಾಗುವಂತಹ ತರಕಾರಿ. ಸೌತೆಕಾಯಿ ಸೇವನೆಯಿಂದ ಸಾಕಷ್ಟು ಪ್ರಯೋಜನಗಳಿವೆ. ಹಾಗೆ ಕೆಲವೊಂದು ಹಾನಿಗೂ ಸೌತೆಕಾಯಿ ಕಾರಣವಾಗುತ್ತದೆ.
ಯಸ್, ಸೌತೆಕಾಯಿಯನ್ನು ಸೈನೋಸೈಟಿಸ್ ಇರುವವರು ಸೇವನೆ ಮಾಡಬಾರದು. ಸೌತೆಕಾಯಿ ತಿರುಳು ತಂಪನ್ನು ನೀಡುತ್ತದೆ. ಸೈನೋಸೈಟಿಸ್ ಸಮಸ್ಯೆಯಿರುವವರು ಸೌತೆಕಾಯಿ ತಿಂದಾಗ ಸಮಸ್ಯೆ ಹೆಚ್ಚಾಗುತ್ತದೆ.
ಗರ್ಭಿಣಿಯರಿಗೆ ಕೂಡ ಸೌತೆಕಾಯಿಯನ್ನು ಕಡಿಮೆ ಸೇವನೆ ಮಾಡುವಂತೆ ಸಲಹೆ ನೀಡಲಾಗುತ್ತದೆ. ಸೌತೆಕಾಯಿಯಲ್ಲಿ ನೀರಿನ ಪ್ರಮಾಣ ಹೆಚ್ಚಿರುತ್ತದೆ. ಇದ್ರ ಸೇವನೆಯಿಂದ ಪದೇ ಪದೇ ಮೂತ್ರ ಬರುತ್ತದೆ. ಆಗಾಗ ಮೂತ್ರ ವಿಸರ್ಜನೆ ಮಾಡುವುದು ಗರ್ಭಿಣಿಯರಿಗೆ ಅನಾನುಕೂಲ.
ಸೌತೆಕಾಯಿಯನ್ನು ಹೆಚ್ಚು ಸೇವನೆ ಮಾಡುವುದ್ರಿಂದ ಹೊಟ್ಟೆ ತುಂಬಿದ ಅನುಭವವಾಗುತ್ತದೆ. ಅದ್ರಲ್ಲಿ ಫೈಬರ್ ಅಂಶ ಹೆಚ್ಚಿರುತ್ತದೆ. ಇದು ಹೊಟ್ಟೆ ನೋವಿಗೆ ಕಾರಣವಾಗಬಹುದು.
ಸೌತೆಕಾಯಿ ಆರೋಗ್ಯಕ್ಕೆ ಹಾನಿ ಎಂಬ ಕಾರಣಕ್ಕೆ ಸೇವನೆ ಬಿಡಬೇಡಿ. ಇತಿ-ಮಿತಿಯಲ್ಲಿ ಸೌತೆಕಾಯಿ ತಿನ್ನಿ. ಸರಿಯಾಗಿ ತೊಳೆದು ತಿನ್ನಿ.