ಈ ವಿಷಯಗಳನ್ನು ನಿರ್ಲಕ್ಷಿಸಿದರೆ ಮೈಗ್ರೇನ್ ಬರಬಹುದು ಎಚ್ಚರ…!

ಶತ್ರುವಿಗೂ ಈ ನೋವು ಬೇಡ ಎನ್ನುವಷ್ಟು ಕಾಡುವ ರೋಗ ಮೈಗ್ರೇನ್. ವಿಪರೀತ ತಲೆನೋವು ಮತ್ತು ವಾಕರಿಕೆ ದೇಹವನ್ನು ಹಿಂಡಿ ಹಿಪ್ಪೆ ಮಾಡುತ್ತದೆ. ಈ ತಲೆನೋವು ಪುರುಷರಿಗಿಂತ ಹೆಚ್ಚು ಮಹಿಳೆಯರಲ್ಲಿ ಕಾಣಿಸಿಕೊಳ್ಳುತ್ತದೆ. ಫ್ರೆಂಚ್ ನ  migraigne ನಿಂದ migraine (ಮೈಗ್ರೇನ್) ಪದವನ್ನು ಪಡೆಯಲಾಗಿದೆ.

ಈಗಿನ ಬದಲಾಗುತ್ತಿರುವ ಜೀವನಶೈಲಿ ಮತ್ತು ಒತ್ತಡದ ಜೀವನ ಮಾನಸಿಕ ಆರೋಗ್ಯದ ಮೇಲೆ ಬಹಳಷ್ಟು ಪರಿಣಾಮ ಬೀರುತ್ತದೆ. ಮೈಗ್ರೇನ್ ಸೈಲೆಂಟ್ ಕಿಲ್ಲರ್. ನಿಧಾನವಾಗಿ ದುಷ್ಪರಿಣಾಮ ಬೀರುತ್ತದೆ. ಸಮಯಕ್ಕೆ ಸರಿಯಾಗಿ ಸಿಗದ ಚಿಕಿತ್ಸೆ ಹಾಗೂ ಸಣ್ಣ ವಿಷಯವೆಂಬ ನಿರ್ಲಕ್ಷ ಈ ಖಾಯಿಲೆ ಹೆಚ್ಚಾಗಲು ಕಾರಣವಾಗುತ್ತದೆ.

ಮಹಿಳೆಯರಲ್ಲಿ ಮೈಗ್ರೇನ್ ಗೆ ಪ್ರಮುಖ ಕಾರಣ ಒತ್ತಡ. ಮನೆ, ಮಕ್ಕಳು, ಕೆಲಸ ಹೀಗೆ ಸದಾ ಒಂದಿಲ್ಲೊಂದು ಒತ್ತಡದಿಂದಾಗಿ ಮಹಿಳೆಯರು ಸುಲಭವಾಗಿ ಮೈಗ್ರೇನ್ ಗೆ ತುತ್ತಾಗುತ್ತಾರೆ. ಇದಲ್ಲದೆ, ವಾತಾವರಣದಲ್ಲಿನ ಬದಲಾವಣೆ, ಆಹಾರ ಪದ್ಧತಿಯಲ್ಲಿ ಲೋಪದೋಷ, ಕಡಿಮೆ ನಿದ್ರೆ ಮತ್ತು ಆಲ್ಕೋಹಾಲ್ ಬಳಕೆ ಇದಕ್ಕೆ ಕಾರಣವಾಗುತ್ತದೆ.

ಕೆಲಸದ ಮಧ್ಯೆ ಮೈಗ್ರೇನ್ ಸಣ್ಣ ವಿಷ್ಯವೆಂಬ ನಿರ್ಲಕ್ಷ್ಯ ಬೇಡ. ಸಮಯಕ್ಕೆ ಸರಿಯಾಗಿ ಔಷಧಿಗಳನ್ನು ತೆಗೆದುಕೊಳ್ಳಿ. ಪ್ರತಿದಿನವೂ ವ್ಯಾಯಾಮ, ಯೋಗ ಮತ್ತು ಧ್ಯಾನ ಮಾಡಿದರೆ ಇನ್ನೂ ಉತ್ತಮ.

ಹವಾಮಾನದಲ್ಲಿ ಹೆಚ್ಚಿನ ಬದಲಾವಣೆ ಮೈಗ್ರೇನ್ ಸಮಸ್ಯೆಯನ್ನು ಹೆಚ್ಚಿಸುತ್ತದೆ. ಮನೆಯಿಂದ ಹೊರಡುವಾಗ ಮುಖಕ್ಕೆ, ದೇಹಕ್ಕೆ ಕವರ್ ಮಾಡಿಕೊಳ್ಳಿ.

ರಾತ್ರಿ ಲೇಟಾಗಿ ಮಲಗುವುದು ಹಾಗೂ ಬೆಳಿಗ್ಗೆ ಬೇಗ ಏಳುವುದರಿಂದ, ವಿಶೇಷವಾಗಿ ಮಹಿಳೆಯರಲ್ಲಿ ನಿದ್ರಾಹೀನತೆ ಮೈಗ್ರೇನ್ ಉಂಟುಮಾಡುತ್ತದೆ.

ಮೈಗ್ರೇನ್ ಸಮಸ್ಯೆ ಇರುವವರು ಕಣ್ಣಿನ ಮೇಲೆ ಹೆಚ್ಚಿನ ಒತ್ತಡ ಹೇರಬಾರದು. ಹೆಚ್ಚು ಬೆಳಕು ಮತ್ತು ಸೂರ್ಯನ ಕಿರಣಗಳಿಂದ ದೂರ ಇರುವುದು ಉತ್ತಮ.

ಹಣ್ಣುಗಳು, ಹಣ್ಣಿನ ರಸ ಮತ್ತು ಹಸಿರು ಎಲೆ ತರಕಾರಿಗಳ ಬಳಕೆ ಮೈಗ್ರೇನ್ ಗೆ ಉತ್ತಮ ಪರಿಹಾರ. ಭೋಜನದಲ್ಲಿ ಸಲಾಡ್ ಇದ್ರೆ ಒಳ್ಳೆಯದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read