![](https://kannadadunia.com/wp-content/uploads/2020/09/Money-Salary-9-1024x683.jpg)
ದೇವಿ ಲಕ್ಷ್ಮಿ ಕೃಪೆಗೆ ಪಾತ್ರರಾಗೋದು ಕಷ್ಟ. ದೇವಿ ಲಕ್ಷ್ಮಿ ಒಮ್ಮೆ ಮನೆಯಲ್ಲಿ ನೆಲೆಸಿದ್ರೆ ಹಣದ ಹೊಳೆ ಹರಿಯುತ್ತದೆ. ಖುಷಿ, ಸಮೃದ್ಧಿಗೆ ಯಾವುದೇ ಕೊರತೆಯಾಗುವುದಿಲ್ಲ. ಆದ್ರೆ ಲಕ್ಷ್ಮಿ ಒಂದು ಜಾಗದಲ್ಲಿ ತುಂಬಾ ಸಮಯ ನೆಲೆಸುವುದಿಲ್ಲ. ತಾಯಿ ಲಕ್ಷ್ಮಿ ಚಂಚಲೆ. ಆದ್ರೆ ಲಕ್ಷ್ಮಿ ಕೃಪೆಗೂ ಮುನ್ನವೇ ಕೆಲವೊಂದು ಸಂಕೇತಗಳು ಲಕ್ಷ್ಮಿ ಕೃಪೆಗೆ ಪಾತ್ರರಾಗಲಿದ್ದೇವೆಂಬ ಮುನ್ಸೂಚನೆಗಳನ್ನು ನಮಗೆ ನೀಡುತ್ತವೆ.
ಅಚಾನಕ್ ನಿಮ್ಮ ಸುತ್ತಮುತ್ತ ಹಸಿರು ಬಣ್ಣಗಳು, ವಸ್ತುಗಳು ಕಾಣಿಸಲು ಶುರುವಾದ್ರೆ ಲಕ್ಷ್ಮಿ ನಿಮಗೆ ಒಲಿಯಲಿದ್ದಾಳೆಂದರ್ಥ.
ಲಕ್ಷ್ಮಿ ಹಾಗೂ ಪೊರಕೆಗೆ ಅವಿನಾಭಾವ ಸಂಬಂಧವಿದೆ. ಬೆಳಿಗ್ಗೆ ಎದ್ದ ತಕ್ಷಣ ಯಾರ ಕೈನಲ್ಲಿಯಾದ್ರೂ ಪೊರಕೆ ನೋಡಿದ್ರೆ ಶೀಘ್ರವೇ ಧನಲಾಭವಾಗಲಿದೆ ಎಂದರ್ಥ.
ಶಂಖದ ಧ್ವನಿ ಕೇಳಿದ್ರೂ ಲಕ್ಷ್ಮಿ ಮನೆ ಪ್ರವೇಶ ಮಾಡಲಿದ್ದಾಳೆಂದರ್ಥ. ಬೆಳಿಗ್ಗೆ ಹಾಸಿಗೆಯಿಂದ ಏಳ್ತಿದ್ದಂತೆ ಶಂಖದ ಧ್ವನಿ ಕೇಳಿದ್ರೆ ಒಳ್ಳೆಯದು.
ಬೆಳ್ಳಂಬೆಳಿಗ್ಗೆ ಕಬ್ಬು ಕಾಣಿಸಿಕೊಂಡ್ರೆ ಶುಭ. ಕಬ್ಬು ಕಂಡ್ರೆ ನಿಮ್ಮ ಅದೃಷ್ಟ ಬದಲಾಗಲಿದೆ ಎಂದೇ ಅರ್ಥ.
ಲಕ್ಷ್ಮಿ ವಾಹನ ಗೂಬೆ ಕಾಣಿಸಿಕೊಂಡ್ರೆ ಲಕ್ಷ್ಮಿ ನಿಮ್ಮ ಮೇಲೆ ಕೃಪೆ ತೋರಿದ್ದಾಳೆ ಎಂದರ್ಥ. ಶೀಘ್ರವೇ ನಿಮ್ಮ ಆರ್ಥಿಕ ಜೀವನದಲ್ಲಿ ವೃದ್ಧಿಯಾಗಲಿದೆ.