ಕಪಾಟು ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಇರುತ್ತದೆ. ಕಪಾಟಿನಲ್ಲಿ ಅಮೂಲ್ಯ ವಸ್ತುಗಳನ್ನು ಇಡಲಾಗುತ್ತದೆ. ಈ ತಿಜೋರಿಯನ್ನು ಎಂದೂ ಖಾಲಿಯಿಡಬಾರದು. ತಿಜೋರಿಗೆ ಸಂಬಂಧಿಸಿದಂತೆ ಕೆಲವೊಂದು ನಿಯಮಗಳನ್ನು ಪಾಲಿಸಿದ್ರೆ ಎಂದೂ ಹಣದ ಸಮಸ್ಯೆ ಎದುರಾಗುವುದಿಲ್ಲ.
ಮನೆಯಲ್ಲಿ ಅಡಿಕೆ ಪೂಜೆ ಮಾಡಿದ ನಂತ್ರ ಅದನ್ನು ಕಪಾಟಿನಲ್ಲಿಡಿ. ಅಡಿಕೆಯನ್ನು ಗೌರಿ-ಗಣೇಶನೆಂದು ಪೂಜೆ ಮಾಡಲಾಗುತ್ತದೆ. ಆರಾಧನೆ ನಂತ್ರ ಅಡಿಕೆಯನ್ನು ಕಪಾಟಿನಲ್ಲಿಟ್ಟರೆ ಗಣೇಶನ ಕೃಪೆಗೆ ಪಾತ್ರರಾಗಬಹುದು. ಲಕ್ಷ್ಮಿ ಕೂಡ ಇಲ್ಲಿ ವಾಸವಾಗ್ತಾಳೆಂಬ ನಂಬಿಕೆಯಿದೆ.
5 ಕವಡೆ ಹಾಗೂ ಕೇಸರಿ, ಬೆಳ್ಳಿಯ ನಾಣ್ಯಗಳನ್ನು ಒಂದು ಹಳದಿ ಬಟ್ಟೆಯಲ್ಲಿ ಕಟ್ಟಿ. ಇದ್ರ ಜೊತೆ ಅರಿಶಿನ ಕೊಂಬನ್ನು ಇಡಿ. ಕೆಲವೇ ದಿನಗಳಲ್ಲಿ ಪರಿಹಾರ ಕಾಣಿಸಲಿದೆ.
ಕಪಾಟಿನಲ್ಲಿ 10-10ರ ನೋಟಿನ ಕಂತೆಯನ್ನು ಇಡಿ. ಇದ್ರ ಜೊತೆಗೆ ಕಂಚಿನ ಹಾಗೂ ತಾಮ್ರದ ನಾಣ್ಯವನ್ನು ಇಡಿ. ಕೆಲ ನಾಣ್ಯಗಳನ್ನು ಜೇಬಿನಲ್ಲಿಡಿ. ಜರ್ಮನ್ ಅಥವಾ ಅಲ್ಯೂಮಿನಿಯಂ ನಾಣ್ಯವನ್ನು ಇಡಬೇಡಿ.
ಅಶ್ವತ್ಥ ಎಲೆಯನ್ನು ತೆಗೆದುಕೊಳ್ಳಿ. ಅದ್ರ ಮೇಲೆ ತುಪ್ಪ ಮಿಶ್ರಿತ ಕುಂಕುಮದಲ್ಲಿ ಓಂ ಬರೆಯಿರಿ. ಇದನ್ನು ಹಣವಿಡುವ ಜಾಗದಲ್ಲಿ ಇಡಿ.