ಕೂದಲುದುರುವುದನ್ನು ತಡೆಗಟ್ಟಲು ಸೇವಿಸಿ ಈ ಆಹಾರ

ಕೂದಲು ಉದುರುವ ಸಮಸ್ಯೆ ಬಹುತೇಕ ಎಲ್ಲರನ್ನು ಕಾಡುತ್ತದೆ. ಒತ್ತಡದ ಜೀವನ, ಆಹಾರ ಶೈಲಿ ಹಾಗೂ ಅನುವಂಶೀಯತೆಯೂ ಇದಕ್ಕೆ ಕಾರಣವಾಗಿದೆ. ಕೆಲವೊಂದು ಆಹಾರ ಪದಾರ್ಥಗಳನ್ನು ಸೇವಿಸಿದರೆ ಕೂದಲುದುರುವುದನ್ನು ತಡೆಗಟ್ಟಬಹುದಾಗಿದೆ.

ನೀವು ಮಾಂಸಹಾರಿಗಳಾಗಿದ್ದಲ್ಲಿ ಸಾಲ್ಮನ್ ಅಥವಾ ಟೂನಾ ಮೀನಿನ ಖಾದ್ಯ ಸೇವಿಸಿದರೆ ಕೂದಲುದುರುವ ಸಮಸ್ಯೆಗೆ ಕೊಂಚ ಮಟ್ಟಿಗೆ ಪರಿಹಾರ ದೊರೆಯುತ್ತದೆ. ಈ ಮೀನಿನಲ್ಲಿ ಒಮೇಗಾ 3 ಫ್ಯಾಟಿ ಆಸಿಡ್ಸ್ ಯಥೇಚ್ಚವಾಗಿ ಇರುವ ಕಾರಣ ಕೂದಲಿನ ಬುಡವನ್ನು ಬಲಿಷ್ಟಗೊಳಿಸುತ್ತದೆ.

ಇನ್ನು ದಿನನಿತ್ಯದ ಆಹಾರದಲ್ಲಿ ಸೊಪ್ಪು, ತರಕಾರಿಗಳನ್ನು ಸೇವಿಸುವುದು ಅತ್ಯವಶ್ಯಕ. ಇದು ಆರೋಗ್ಯ ಕಾಪಾಡಿಕೊಳ್ಳಲೂ ಸಹಕಾರಿಯಾಗುವುದಲ್ಲದೇ ವಿಟಮಿನ್ಸ್, ಮಿನರಲ್ಸ್ ಹಾಗೂ ಅಂಟಿ ಅಕ್ಸಿಡೆಂಟ್ ಹೇರಳವಾಗಿರುವ ಕಾರಣ ಕೂದಲು ಉದುರುವುದು ಕಡಿಮೆಯಾಗುತ್ತದೆ. ಬೀಟಾ ಕೆರೋಟಿನ್ ಹಾಗೂ ವಿಟಮಿನ್ ಎ ಸಮೃದ್ದವಾಗಿರುವ ಕ್ಯಾರೆಟ್ ತಿನ್ನುವುದರಿಂದಲೂ ಕೂದಲು ಬೆಳೆಯಲು ಸಹಕಾರಿಯಾಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read