ಕಿಡ್ನಿ ನಮ್ಮ ದೇಹದ ಬಹುಮುಖ್ಯ ಅಂಗ. ಕಿಡ್ನಿಯನ್ನು ಆರೋಗ್ಯವಾಗಿಡುವುದು ತುಂಬಾನೇ ಮುಖ್ಯ. ಕಿಡ್ನಿಯಲ್ಲಿ ಕಲ್ಲುಗಳಾಗಿ ದೇಹದ ವ್ಯವಸ್ಥೆ ಏರುಪೇರಾಗುವುದಕ್ಕಿಂತ ಮೊದಲೇ ಎಚ್ಚೆತ್ತುಕೊಳ್ಳುವುದು ಉತ್ತಮ. ಕಿಡ್ನಿಯ ಆರೋಗ್ಯಕ್ಕೆ ಈ 5 ಹವ್ಯಾಸಗಳನ್ನು ನೀವು ರೂಢಿಸಿಕೊಳ್ಳುವುದು ಅತಿ ಮುಖ್ಯ.
ದೇಹದಲ್ಲಿ ನೀರಿನಂಶ ಹೆಚ್ಚಾಗಿರುವಂತೆ ನೋಡಿಕೊಳ್ಳಿ. ನೀರು ಕುಡಿಯುವುದರೊಂದಿಗೆ ನೀರಿನಂಶಗಳುಳ್ಳ ಆಹಾರ ಸೇವಿಸಿ.
ಉಪ್ಪಿನ ಸೇವನೆಯನ್ನು ಕಡಿಮೆ ಮಾಡಿ. ಇದು ದೇಹದಲ್ಲಿನ ನೀರಿನಂಶವನ್ನು ಕಡಿಮೆ ಮಾಡುತ್ತದೆ.
ದೇಹಕ್ಕೆ ಬೇಕಾದಷ್ಟು ಕ್ಯಾಲ್ಸಿಯಂ ನೀಡಿ. ಕ್ಯಾಲ್ಸಿಯಂ ಅಂಶಗಳುಳ್ಳ ಸೊಪ್ಪು, ತರಕಾರಿಗಳನ್ನು ಸೇವಿಸಿ.
ಪ್ರಾಣಿಗಳ ದೇಹದಲ್ಲಿನ ಪ್ರೋಟೀನ್ ಅಂಶ ದೇಹವನ್ನು ಹೆಚ್ಚಾಗಿ ಸೇರುವುದನ್ನು ತಪ್ಪಿಸಿ.
ಕಿಡ್ನಿಯಲ್ಲಿ ಕಲ್ಲುಗಳನ್ನು ಉಂಟು ಮಾಡಲು ಕಾರಣವಾಗಬಹುದಾದ ಟೀ, ಆಲೂಗಡ್ಡೆ, ದ್ರಾಕ್ಷಿ, ಬೆರ್ರಿ ಹಣ್ಣುಗಳು, ಮುಂತಾದವುಗಳ ಸೇವನೆ ಹಿತಮಿತವಾಗಿರಲಿ.