ಚೆನ್ನಾಗಿ ನಿದ್ರೆ ಮಾಡಲು ಪ್ರತಿಯೊಬ್ಬರು ಬಯಸ್ತಾರೆ. ಸುಖ ನಿದ್ರೆಯಿಲ್ಲದೆ ಪರಿತಪಿಸುವವರು ಸಾಕಷ್ಟು ಮಂದಿ. ಶಾಂತ ಪ್ರದೇಶ, ಸುಂದರ ಹಾಸಿಗೆಯಿದ್ದರೂ ಅನೇಕ ಬಾರಿ ಸುಖ ನಿದ್ರೆ ಹತ್ತಿರ ಸುಳಿಯೋದಿಲ್ಲ. ಇದಕ್ಕೆ ವಾಸ್ತು ದೋಷವೂ ಕಾರಣವಾಗುತ್ತದೆ. ಕೆಲವೊಂದು ಉಪಾಯಗಳನ್ನು ಅನುಸರಿಸಿದ್ರೆ ಸುಖ ನಿದ್ರೆ ನಿಮ್ಮನ್ನು ಆವರಿಸುತ್ತದೆ.
ಒಂಟಿ ಮನೆಯಲ್ಲಿ ಒಬ್ಬರೇ ನಿದ್ರೆ ಮಾಡಬಾರದು. ದೇವಸ್ಥಾನ ಹಾಗೂ ಚಿತಾಗಾರದಲ್ಲಿ ಕೂಡ ನಿದ್ರೆ ಮಾಡಬಾರದು.
ನಿದ್ರೆ ಮಾಡಿದ ವ್ಯಕ್ತಿಯನ್ನು ಅಚಾನಕ್ಕಾಗಿ ಏಳಿಸಬಾರದು.
ವಿದ್ಯಾರ್ಥಿಗಳು, ಉದ್ಯೋಗಿಗಳು, ದ್ವಾರಪಾಲಕರು ತುಂಬಾ ಹೊತ್ತು ಮಲಗಬಾರದು.
ಗಾಢ ಕತ್ತಲಿರುವ ಕೋಣೆಯಲ್ಲಿ ಮಲಗಬಾರದು.
ಒದ್ದೆ ಕಾಲಿನಲ್ಲಿ ಹಾಸಿಗೆ ಮೇಲೆ ಮಲಗಬಾರದು. ಒಣಗಿದ ಕಾಲಿನಲ್ಲಿ ಮಲಗಬೇಕು. ಇಲ್ಲವಾದ್ರೆ ಲಕ್ಷ್ಮಿ ಮುನಿಸಿಕೊಳ್ತಾಳೆ.
ಹರಿದ ಹಾಸಿಗೆಯಲ್ಲಿ ಮಲಗಬಾರದು.
ನಗ್ನವಾಗಿ ಎಂದೂ ನಿದ್ರೆ ಮಾಡಬಾರದು.
ಹಗಲಿನಲ್ಲಿ ಮಲಗಬಾರದು. ಜೇಷ್ಠ ಮಾಸದಲ್ಲಿ ಮಧ್ಯಾಹ್ನ ಕೊಂಚ ಹೊತ್ತು ಮಲಗಬಹುದು.
ಸೂರ್ಯಾಸ್ತವಾದ ಮೂರು ಗಂಟೆ ನಂತ್ರ ಮಲಗಬೇಕು.
ಎಡ ಭಾಗಕ್ಕೆ ವಾಲಿ ಮಲಗುವುದು ಶುಭಕರ.
ಹಾಸಿಗೆ ಮೇಲೆ ಕುಳಿತು ಆಹಾರ ಸೇವನೆ ಮಾಡುವುದು ಅಶುಭ.
ಮಲಗಿ ಓದಬಾರದು.
ತಿಲಕವಿಟ್ಟು ಮಲಗುವುದು ಅಶುಭ. ಹಾಗಾಗಿ ಮಲಗುವ ಮುನ್ನ ತಿಲಕವನ್ನು ತೆಗೆಯಬೇಕು.