ತೆಳ್ಳಗೆ ಕಾಣಿಸಬೇಕು ಅನ್ನೋದು ಬಹುತೇಕ ಮಹಿಳೆಯರ ಆಸೆ. ಆದ್ರೆ ಇಂದಿನ ಲೈಫ್ ಸ್ಟೈಲ್ ನಿಂದಾಗಿ ಹೊಟ್ಟೆಯ ಸುತ್ತ ಒಂದು ಸುತ್ತು ಕೊಲೆಸ್ಟ್ರಾಲ್ ತುಂಬಿಕೊಂಡಿರುತ್ತೆ. ಈ ಬೊಜ್ಜಿನಿಂದಾಗಿ ಎಲ್ಲಾ ಬಗೆಯ ಡ್ರೆಸ್ ಗಳನ್ನು ಹಾಕೋಕಾಗಲ್ಲ ಅನ್ನೋದು ಅನೇಕರ ಗೋಳು. ಹಾಗಿದ್ರೆ ಬೊಜ್ಜಿದ್ದವರು ತೆಳ್ಳಗಾಗಿ ಕಾಣೋಕೆ ಇಲ್ಲಿದೆ 5 ಅದ್ಭುತ ಫ್ಯಾಷನ್ ಟಿಪ್ಸ್.
ಸರಿಯಾದ ಶೂ ಆಯ್ಕೆ ಮಾಡಿಕೊಳ್ಳಿ : ಪಾಯಿಂಟ್ ಹೀಲ್ಸ್ ಅತ್ಯುತ್ತಮ. ಇದರಿಂದ ನಿಮ್ಮ ಕಾಲುಗಳು ನೀಳವಾಗಿ ಕಾಣುವುದರಿಂದ ನೀವೂ ಸಹ ತೆಳ್ಳಗೆ ಕಾಣುತ್ತೀರಾ.
ಸರಿಯಾದ ಬಟ್ಟೆ ಆಯ್ಕೆ ಮಾಡಿ : ಕೆಲವೊಂದು ಬಟ್ಟೆಗಳಲ್ಲಿ ನೀವು ತೆಳ್ಳಗೆ ಕಾಣುತ್ತೀರಾ. ಕಾಟನ್, ಸಮ್ಮರ್ ಕೂಲ್ ಫ್ಯಾಷನ್ ಕ್ಲಾಥ್ ಗಳಲ್ಲಿ ನೀವು ದಪ್ಪಗಿದ್ದೀರಿ ಅನ್ನಿಸೋದಿಲ್ಲ.
ಬಾಡಿ ಶೇಪರ್ ಬಳಸಿ : ಕೆಲವೊಂದು ಡ್ರೆಸ್ ಗಳನ್ನು ಹಾಕುವಾಗ ನೀವು ಬಾಡಿ ಶೇಪರ್ ಬಳಸಬಹುದು. ಟೈಟ್ ಆದ ಡ್ರೆಸ್, ಪೆನ್ಸಿಲ್ ಕಟ್ ಸ್ಕರ್ಟ್ ಮುಂತಾದವನ್ನು ಹಾಕುವಾಗ ಬಾಡಿ ಶೇಪರ್ ಬೆಸ್ಟ್.
ನಿಮ್ಮ ದೇಹದ ಅಳತೆಗೆ ಸರಿಯಾದ ಬಟ್ಟೆ ಹಾಕಿಕೊಳ್ಳಿ : ತುಂಬಾ ಸಡಿಲವಾದ ಅಥವಾ ಬಿಗಿಯಾದ ಬಟ್ಟೆ ಹಾಕಬೇಡಿ. ಸರಿಯಾದ ಅಳತೆಯ ಡ್ರೆಸ್ ಜೊತೆಗೆ ಹೈ ಹೀಲ್ಸ್ ಶೂ ಧರಿಸಿ.
ಲಾಂಗ್ ಜಾಕೆಟ್ : ಇದು ನಿಮ್ಮನ್ನು ತೆಳ್ಳಗೆ ಕಾಣುವಂತೆ ಮಾಡುತ್ತದೆ.