ಶ್ರದ್ಧೆಯಿಂದ ಯಾವ ಕೆಲಸ ಮಾಡಿದ್ರೂ ಯಶಸ್ಸು ಕಟ್ಟಿಟ್ಟ ಬುತ್ತಿ. ನಾವು ನಂಬಿಕೆ ಹಾಗೂ ವಿಶ್ವಾಸವಿಟ್ಟು ನಡೆದರೆ ನಾವು ಬಯಸಿದ ಗುರಿಯನ್ನು ಸುಲಭವಾಗಿ ತಲುಪಬಹುದು. ಜ್ಯೋತಿಷ್ಯ ಶಾಸ್ತ್ರವೂ ಇದನ್ನೇ ಹೇಳುತ್ತದೆ.
ಪ್ರತಿಯೊಬ್ಬ ಬುದ್ಧಿವಂತನಾಗಲು ಬಯಸುತ್ತಾನೆ. ವಿದ್ಯೆಗಾಗಿ ವಿದ್ಯಾರ್ಥಿಗಳು ಸರಸ್ವತಿ ಹಾಗೂ ಗಣಪತಿಯನ್ನು ಪ್ರಾರ್ಥಿಸುತ್ತಾರೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ವಿದ್ಯೆಯನ್ನು ಸುಲಭವಾಗಿ ಪಡೆಯುವ ವಿಧಾನ ಹೇಳಲಾಗಿದೆ. ಯಾರು ಅವುಗಳನ್ನು ಶ್ರದ್ಧೆಯಿಂದ ಮಾಡ್ತಾರೋ ಅವರು ನಿಶ್ಚಿತವಾಗಿ ಬುದ್ದಿವಂತರಾಗ್ತಾರಂತೆ.
ಪ್ರತಿದಿನ ದಿನನಿತ್ಯದ ಕಾರ್ಯ ಮುಗಿಸಿ, ಸ್ನಾನ ಮಾಡಿ ದೇವರ ಮನೆಗೆ ಹೋಗಬೇಕು. ಅಲ್ಲಿ ಶ್ರದ್ಧೆಯಿಂದ ಗಾಯತ್ರಿ ಮಂತ್ರವನ್ನು ಜಪಿಸಬೇಕು.
ಪೂಜಾ ಸ್ಥಳಕ್ಕೆ ಹೋಗಿ ರಾಮಚರಿತ ಮಾನಸದ ಈ ಮಂತ್ರವನ್ನು 108 ಬಾರಿ ಜಪಿಸಬೇಕೆಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ‘ಗುರು ಗೃಹ ಗಾಯೇ ಪಠಣ ರಘುರಾಯಿ, ಅಲ್ಪಕಾಲ ವಿದ್ಯಾ ಸಬ ಆಯಿ’
ಗುರುವಾರದ ದಿನ ದೇವಿ ಸರಸ್ವತಿಯ ಮೂರ್ತಿ ಅಥವಾ ಫೋಟೋ ಮುಂದೆ ಕುಳಿತು ‘ಮಾ ಸರಸ್ವತಿ ವಿದ್ಯಾ ದೇವಿ ನಮೋ ನಮಃ’ ಎಂದು ಜಪಿಸಬೇಕು. ಗುರುವಾರ ಬಡ ಮಕ್ಕಳಿಗೆ ಪುಸ್ತಕ, ಪೆನ್ನು, ಪೆನ್ಸಿಲ್ ದಾನವಾಗಿ ನೀಡುವುದರಿಂದಲೂ ಒಳ್ಳೆಯದಾಗುತ್ತದೆ.
ಕರಿ ಮೆಣಸು, ಶುಂಠಿ, ಏಲಕ್ಕಿ ಮತ್ತು ಸಕ್ಕರೆಯನ್ನು ಪುಡಿ ಮಾಡಿ ಅದನ್ನು ಉಂಡೆಗಳನ್ನಾಗಿ ಮಾಡಿಟ್ಟುಕೊಳ್ಳಿ. ಈ ಉಂಡೆಗಳನ್ನು ರಾತ್ರಿ ಮಲಗುವ ವೇಳೆ ಹಾಲಿನ ಜೊತೆ ಸೇವಿಸಿ. ಜ್ಞಾಪಕ ಶಕ್ತಿ ಹೆಚ್ಚಾಗುತ್ತದೆ.