![Image result for vastu-mistakes-may-cause-money-loss](https://static.punjabkesari.in/multimedia/2018_2image_16_40_501349564milkinvessel-ll.jpg)
ಹಗಲಿರುಳು ಕಷ್ಟಪಟ್ಟು ಕೆಲಸ ಮಾಡಿದ್ರೂ ಕೆಲವೊಮ್ಮೆ ಹಣ ಕೈನಲ್ಲಿ ನಿಲ್ಲುವುದಿಲ್ಲ. ಬಂದ ಹಣ ಹಾಗೆಯೇ ವಾಪಸ್ ಹೋಗುತ್ತದೆ. ಮನೆಯಲ್ಲಿ ನೆಮ್ಮದಿ ಇಲ್ಲವಾಗುತ್ತದೆ.
ಇದಕ್ಕೆ ವಾಸ್ತು ದೋಷ ಕಾರಣ. ನಮಗೆ ತಿಳಿಯದೆ ಅಥವಾ ತಿಳಿದೂ ನಿರ್ಲಕ್ಷ್ಯಿಸುವ ಕೆಲ ಕೆಲಸಗಳಿಂದ ಸಮಸ್ಯೆ ಶುರುವಾಗುತ್ತದೆ.
ಹಾಲು ಕೂಡ ಮನೆಯ ವಾಸ್ತು ದೋಷಕ್ಕೆ ಕಾರಣವಾಗುತ್ತದೆ. ವಾಸ್ತು ತಜ್ಞರ ಪ್ರಕಾರ ಮನೆಯಲ್ಲಿ ಎಂದೂ ಹಾಲನ್ನು ಮುಚ್ಚದೆ ಇಡಬಾರದು. ಹಾಲು ಬಿಸಿಯಾಗಿದೆ ಎನ್ನುವ ಕಾರಣಕ್ಕೆ ಹಾಗೆ ಬಿಡಬೇಡಿ. ಹಾಲಿನ ಪಾತ್ರೆಯನ್ನು ಸ್ವಲ್ಪವಾದ್ರೂ ಮುಚ್ಚಿಡಿ.
ಹಳೆ ಹೂವನ್ನು ದೇವರ ಮನೆಯಲ್ಲಿ ಎಂದೂ ಇಡಬಾರದು. ಸ್ನಾನ ಮಾಡಿ, ದೇವರಿಗೆ ಹೊಸ ಹೂವನ್ನು ಹಾಕಿ ಪೂಜೆ ಮಾಡ್ತಾರೆ. ಆದ್ರೆ ಹಳೆ ಹೂವನ್ನು ದೇವರ ಮನೆಯಲ್ಲಿಯೇ ಇಡ್ತಾರೆ. ಈ ಹಳೆ ಹೂ ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ ಎಂಬುದು ನೆನಪಿರಲಿ.
ಮನೆಯ ಸದಸ್ಯರು ಆಹಾರ ಸೇವನೆ ಮಾಡುವ ಮೊದಲು ಆಕಳಿಗೆ ಆಹಾರ ನೀಡಿ. ಪ್ರತಿ ದಿನ ಹೀಗೆ ಮಾಡುತ್ತ ಬಂದಲ್ಲಿ ಕಾಡುವ ಆರ್ಥಿಕ ಸಮಸ್ಯೆ ಕಡಿಮೆಯಾಗುತ್ತದೆ.
ಅಡಿಗೆ ಮನೆ ಅಥವಾ ಕಪಾಟಿನ ಬಳಿ ಶೂ-ಚಪ್ಪಲಿಯನ್ನು ಇಡಬೇಡಿ. ವಾಸ್ತು ಶಾಸ್ತ್ರದ ಪ್ರಕಾರ ಇದು ಅಶುಭ. ಇದ್ರಿಂದ ಕುಟುಂಬಸ್ಥರು ಸಾಕಷ್ಟು ಹಾನಿಗಳನ್ನು ಎದುರಿಸಬೇಕಾಗುತ್ತದೆ.
ಮುಳ್ಳಿನ ಗಿಡ ಎಷ್ಟು ಸುಂದರವಾಗಿದ್ದರೂ ಮನೆಯೊಳಗೆ ಇಡಬೇಡಿ. ಮುಳ್ಳಿನ ಗಿಡವನ್ನು ಮನೆಯಿಂದ ಹೊರಗಿಡಬೇಕು. ಇದು ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ.