ಮನೆ ಸುಂದರವಾಗಿರಬೇಕೆಂದು ಎಲ್ಲರೂ ಬಯಸ್ತಾರೆ. ಮನೆಯ ಸ್ವಚ್ಛತೆಗೆ ಮಹತ್ವ ನೀಡ್ತಾರೆ. ಕೆಲವೊಮ್ಮೆ ಮನೆಯನ್ನು ಎಷ್ಟು ಸ್ವಚ್ಛವಾಗಿಟ್ಟುಕೊಂಡರೂ ಮೂಲೆಯಲ್ಲಿ ಜೇಡ ಮನೆ ಮಾಡುತ್ತದೆ. ಕೆಲವರು ಜೇಡವನ್ನು ನೋಡಿಯೂ ಸುಮ್ಮನಿರ್ತಾರೆ. ಮತ್ತೆ ಕೆಲವರು ವಾರಗಟ್ಟಲೆ ಜೇಡ ಕಟ್ಟಿರುವುದನ್ನು ನೋಡಿರುವುದಿಲ್ಲ.
ನಿಮಗೆ ಆಶ್ಚರ್ಯವಾಗಬಹುದು, ಶಾಸ್ತ್ರದ ಪ್ರಕಾರ ಮನೆಯಲ್ಲಿ ಜೇಡ ಕಟ್ಟುವುದು ಅಶುಭ. ಇದು ಜೀವನದ ಅನೇಕ ತೊಂದರೆಗೆ ಕಾರಣವಾಗುತ್ತದೆ. ಮನೆಯ ಗೋಡೆಗೆ ಕಟ್ಟುವ ಜೇಡ ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆಯಂತೆ. ಇದು ಅನೇಕ ರೋಗಗಳನ್ನು ಹರಡುತ್ತದೆ.
ಒತ್ತಡಕ್ಕೆ ಒಂದು ಮಹತ್ವದ ಕಾರಣ ಜೇಡ ಎನ್ನುತ್ತದೆ ಜ್ಯೋತಿಷ್ಯ. ಇದು ಮನುಷ್ಯನ ಮಾನಸಿಕ ರೋಗಕ್ಕೆ ಕಾರಣವಾಗುತ್ತದೆಯಂತೆ. ಜೇಡ ಕಟ್ಟಿದ ಮನೆಯಲ್ಲಿ ವಾಸಿಸುವ ವ್ಯಕ್ತಿಗಳ ಮನಸ್ಸು ಸ್ಥಿರವಾಗಿರುವುದಿಲ್ಲ. ಮಕ್ಕಳ ಮೇಲೂ ಇದು ಪ್ರಭಾವ ಬೀರುತ್ತದೆ. ಮಕ್ಕಳ ಆರೋಗ್ಯ ಮತ್ತು ಬುದ್ದಿ ಮೇಲೆ ಕೆಟ್ಟ ಪ್ರಭಾವ ಬೀರುತ್ತದೆ.
ಜೇಡ ಕಟ್ಟಿದ ಮನೆಯವರನ್ನು ಸದಾ ಸಮಸ್ಯೆ ಕಾಡುತ್ತದೆ. ಸುಖ-ಸಮೃದ್ಧಿ ನಾಶವಾಗುತ್ತದೆ. ಜೇಡದ ಬಲೆಯಲ್ಲಿ ಅನಾರೋಗ್ಯಕ್ಕೆ ಕಾರಣವಾಗುವ ಸೂಕ್ಷ್ಮ ಜೀವಿಗಳಿರುತ್ತವೆ. ಅವು ಅನೇಕ ರೋಗಕ್ಕೆ ಆಹ್ವಾನ ನೀಡುತ್ತವೆ ಎಂಬುದನ್ನು ವಿಜ್ಞಾನಿಗಳೂ ಹೇಳಿದ್ದಾರೆ.