ಮದುವೆ ನಂತ್ರ ಸಂಬಂಧದಲ್ಲಿ ಅನೇಕ ಬದಲಾವಣೆಗಳಾಗ್ತವೆ. ಮದುವೆಗಿಂತ ಮೊದಲು ಹಾಸ್ಯದ ವಿಷ್ಯ ಮದುವೆ ನಂತ್ರ ಗಂಭೀರತೆ ಪಡೆಯುತ್ತವೆ. ಆ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸುವ ಅವಶ್ಯಕತೆಯಿದೆ. ಮದುವೆಯಾದ ತಕ್ಷಣ ಕೆಲವೊಂದು ಸಂಗತಿಗಳ ಬಗ್ಗೆ ಸಂಗಾತಿ ಜೊತೆ ಅಪ್ಪಿತಪ್ಪಿಯೂ ಮಾತನಾಡಬೇಡಿ.
ಮದುವೆಯ ಖರ್ಚು : ಮದುವೆ ಸಮಯದಲ್ಲಿ ಖರ್ಚಾಗೋದು ಸಹಜ. ಆದ್ರೆ ಕೆಲವರು ಈ ಖರ್ಚಿನ ಬಗ್ಗೆ ಆಗಾಗ ಸಂಗಾತಿ ಜೊತೆ ಮಾತನಾಡ್ತಿರುತ್ತಾರೆ. ಮದುವೆಗೆ ಅಷ್ಟು ಖರ್ಚಾಯ್ತು, ಇಷ್ಟು ಖರ್ಚಾಯ್ತು ಎನ್ನುತ್ತಾರೆ. ಮದುವೆಯಾದ ತಕ್ಷಣ ಸಂಗಾತಿ ಜೊತೆ ಈ ವಿಷ್ಯಗಳನ್ನು ಚರ್ಚಿಸಿ ವಿನಾ: ಕಾರಣ ಈ ಬಗ್ಗೆ ಗಲಾಟೆ ಮಾಡಿಕೊಳ್ಳುವುದು ಒಳ್ಳೆಯದಲ್ಲ.
ಸಂಬಂಧಿಕರ ಬಗ್ಗೆ ಅಪಹಾಸ್ಯ : ಸಂಬಂಧಿಕರ ಬಗ್ಗೆ ಅಪಹಾಸ್ಯ ಮಾಡುವುದು ಒಳ್ಳೆಯದಲ್ಲ. ಹುಡುಗ ಇರಲಿ ಇಲ್ಲ ಹುಡುಗಿಯಿರಲಿ ಅವರ ಸಂಬಂಧಿಕರ ಬಗ್ಗೆ ಅಪಹಾಸ್ಯದ ಮಾತನಾಡಿದ್ರೆ ಸಂಗಾತಿಗೆ ನೋವಾಗುವ ಸಾಧ್ಯತೆಯಿರುತ್ತದೆ.
ಮಾಜಿ ಪ್ರೇಮಿ ಜೊತೆ ಹೋಲಿಕೆ : ಇದನ್ನು ಎಂದೂ ಅಪ್ಪಿತಪ್ಪಿಯೂ ಮಾಡಬೇಡಿ. ಇದು ನಿಮ್ಮ ವೈವಾಹಿಕ ಜೀವನದ ಮೇಲೆ ಅಡ್ಡ ಪರಿಣಾಮ ಬೀರುವುದು ನಿಶ್ಚಿತ.
ಬೇಧ-ಭಾವ : ದಾಂಪತ್ಯದಲ್ಲಿ ಬೇಧ ಭಾವ ಇರಬಾರದು. ಅದು ನಿನ್ನ ಕೆಲಸ, ಇದು ನಿನ್ನ ಕೆಲಸ ಎಂದು ಪರಸ್ಪರ ಕಿತ್ತಾಡಿಕೊಳ್ಳಬಾರದು. ಇಬ್ಬರು ಒಂದೇ ಎಂಬ ಭಾವನೆಯೊಂದಿಗೆ ಕೆಲಸ ಮಾಡಿದ್ರೆ ದಾಂಪತ್ಯ ಗಟ್ಟಿಯಾಗಿರುತ್ತದೆ.