ಬೆಂಡೆಕಾಯಿಯನ್ನು ಸಾಮಾನ್ಯವಾಗಿ ಎಲ್ಲರೂ ಇಷ್ಟಪಡ್ತಾರೆ. ಇದು ರುಚಿಕರ ಹಾಗೂ ಆರೋಗ್ಯಕ್ಕೆ ಬಹಳ ಒಳ್ಳೆಯದು. ಬೆಂಡೆಕಾಯಿ ಪೆಪ್ಪರ್ ಫ್ರೈ ಸುಲಭವಾಗಿ ಮಾಡೋದನ್ನು ನಾವು ಹೇಳ್ತೇವೆ ಕೇಳಿ.
ಬೆಂಡೆಕಾಯಿ ಪೆಪ್ಪರ್ ಫ್ರೈ ಮಾಡಲು ಬೇಕಾಗುವ ಪದಾರ್ಥ:
ಎಣ್ಣೆ -2 ಚಮಚ
ಸಾಸಿವೆ -1/2 ಚಮಚ
ಬೆಳ್ಳುಳ್ಳಿ ಪೇಸ್ಟ್ -1/2 ಚಮಚ
ಉದ್ದಿನ ಬೇಳೆ -1 ಚಮಚ
ಹಿಂಗು-1/4 ಚಮಚ
ಕರಿ ಬೇವು -10-12 ಎಲೆ
ಈರುಳ್ಳಿ – ಒಂದು
ಬೆಂಡೆಕಾಯಿ -250 ಗ್ರಾಂ
ಉಪ್ಪು – ಒಂದು ಚಮಚ
ಕಾಳು ಮೆಣಸು -2 ಚಮಚ
ಜೀರಿಗೆ ಪುಡಿ -2 ಚಮಚ
ತೆಂಗಿನ ತುರಿ -2 ಚಮಚ
ಬೆಂಡೆ ಕಾಯಿ ಪೆಪ್ಪರ್ ಫ್ರೈ ಮಾಡುವ ವಿಧಾನ :
ಒಂದು ಪ್ಯಾನ್ ಗೆ ಎಣ್ಣೆ, ಸಾಸಿವೆ, ಬೆಳ್ಳುಳ್ಳಿ ಪೇಸ್ಟ್ ಹಾಕಿ 2-3 ನಿಮಿಷ ಬೇಯಿಸಿ. ನಂತ್ರ ಅದಕ್ಕೆ ಕರಿಬೇವಿನ ಎಲೆಯನ್ನು ಹಾಕಿ. ಅದಕ್ಕೆ ಹಿಂಗು, ಉದ್ದಿನ ಬೇಳೆ ಹಾಗೂ ಈರುಳ್ಳಿ ಹಾಕಿ. ಇದು ಸ್ವಲ್ಪ ಫ್ರೈ ಆಗ್ಲಿ. ನಂತ್ರ ಬೆಂಡೆಕಾಯಿ, ಉಪ್ಪು, ಕಾಳು ಮೆಣಸಿನ ಪುಡಿ, ಜೀರಿಗೆ ಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಕೊನೆಯಲ್ಲಿ 2 ಚಮಚ ತೆಂಗಿನ ತುರಿಯನ್ನು ಬೆರೆಸಿ. ಬೆಂಡೆಕಾಯಿ ಬೆಂದ ನಂತ್ರ ಗ್ಯಾಸ್ ಆರಿಸಿ.