ನಮ್ಮನ್ನು ಕಾಡುವ ಬಹುತೇಕ ರೋಗಗಳಿಗೆ ಮನೆಯಲ್ಲಿಯೇ ಮದ್ದಿದೆ. ಅಡುಗೆ ಮನೆಯಲ್ಲಿರುವ ಪದಾರ್ಥಗಳಿಗೆ ನಮ್ಮ ಆರೋಗ್ಯ ಕಾಪಾಡುವ ಶಕ್ತಿ ಇದೆ. ಅದ್ರಲ್ಲಿ ಬೆಲ್ಲ ಕೂಡ ಒಂದು. ಬೆಲ್ಲ ತಿನ್ನಲ್ಲೊಂದೇ ಸಿಹಿಯಲ್ಲ. ಆರೋಗ್ಯಕ್ಕೂ ಒಳ್ಳೆಯದು.
ಪ್ರತಿದಿನ 20 ಗ್ರಾಂ ಬೆಲ್ಲವನ್ನು ಸೇವನೆ ಮಾಡಬೇಕು ಎಂದು ಆಯುರ್ವೇದದಲ್ಲಿ ಹೇಳಲಾಗಿದೆ.ಬೆಲ್ಲ ತಿನ್ನುವುದು ಜೀರ್ಣಕ್ರಿಯೆಗೆ ಒಳ್ಳೆಯದು ಎಂದು ಆಯುರ್ವೇದದಲ್ಲಿ ಹೇಳಲಾಗಿದೆ.
ಬೆಲ್ಲ ಹೊಟ್ಟೆ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ಆಹಾರ ಸೇವನೆ ನಂತ್ರ ಬೆಲ್ಲ ತಿನ್ನುವುದ್ರಿಂದ ಜೀರ್ಣಕ್ರಿಯೆ ಸರಿಯಾಗುವ ಜೊತೆಗೆ ಗ್ಯಾಸ್ ಸಮಸ್ಯೆ ದೂರವಾಗುತ್ತದೆ. 7 ದಿನ ರಾತ್ರಿ ಮಲಗುವಾಗ ಬೆಲ್ಲ ತಿಂದು ಮಲಗಿದ್ರೆ ನಿದ್ರೆ ಸರಿಯಾಗಿ ಬರುವ ಜೊತೆಗೆ ಗ್ಯಾಸ್ ಸಮಸ್ಯೆ ಕಡಿಮೆಯಾಗುತ್ತದೆ.
ಚಳಿಗಾಲದಲ್ಲಿ ಬೆಲ್ಲ ತಿನ್ನುವುದು ಬಹಳ ಒಳ್ಳೆಯದು. ಚಳಿಗಾಲದಲ್ಲಿ ಕಾಡುವ ನೆಗಡಿ, ಕೆಮ್ಮ, ಶೀತವನ್ನು ಗುಣಪಡಿಸುವ ಶಕ್ತಿ ಬೆಲ್ಲಕ್ಕಿದೆ. ಬೆಲ್ಲವನ್ನು ಹಾಲು ಅಥವಾ ಟೀ ಜೊತೆ ಸೇವನೆ ಮಾಡಬಹುದು.
ಶುಂಠಿಯನ್ನು ಬೆಲ್ಲದ ಜೊತೆ ಬಿಸಿ ಮಾಡಿ ಬೆಚ್ಚಗಿರುವಾಗಲೇ ತಿನ್ನುವುದ್ರಿಂದ ಗಂಟಲು ನೋವು ಕಡಿಮೆಯಾಗುತ್ತದೆ. ಧ್ವನಿ ಕೂಡ ಮಧುರವಾಗುತ್ತದೆ. ಕೀಲು ನೋವಿನ ಸಮಸ್ಯೆಯಿರುವವರು ಪ್ರತಿದಿನ ಬೆಲ್ಲದ ಜೊತೆ ಶುಂಠಿಯನ್ನು ತಿನ್ನಬೇಕು.
ಚರ್ಮದ ಸಮಸ್ಯೆಗೂ ಬೆಲ್ಲ ಉತ್ತಮ. ಪ್ರತಿದಿನ ಬೆಲ್ಲ ತಿನ್ನುವುದ್ರಿಂದ ಚರ್ಮ ಸಮಸ್ಯೆ ದೂರವಾಗುತ್ತದೆ. ರಕ್ತದಲ್ಲಿರುವ ಹಾನಿಕಾರಕ ಅಂಶವನ್ನು ಹೊರ ಹಾಕಿ ರಕ್ತ ಪರಿಚಲನೆ ಸುಧಾರಿಸುತ್ತದೆ.
ಪ್ರತಿದಿನ ಬೆಲ್ಲ ತಿಂದ ನಂತ್ರ ಸ್ವಲ್ಪ ನೀರು ಕುಡಿಯಬೇಕು. ಬೆಲ್ಲದಲ್ಲಿ ಕ್ಯಾಲ್ಸಿಯಂ ಅಂಶ ಹೆಚ್ಚಿರುವುದ್ರಿಂದ ಇದು ಆರೋಗ್ಯಕ್ಕೆ ಬಹಳ ಒಳ್ಳೆಯದು. ಸುಸ್ತಾಗುತ್ತಿದ್ದ ವೇಳೆ ಬೆಲ್ಲ ತಿಂದು ನೀರು ಕುಡಿಯಬೇಕು. ಕೆಲವೇ ಕ್ಷಣಗಳಲ್ಲಿ ಸುಸ್ತು ಕಡಿಮೆ ಮಾಡಿ ದೇಹಕ್ಕೆ ಹೊಸ ಉತ್ಸಾಹ ತುಂಬುವ ಕೆಲಸವನ್ನು ಬೆಲ್ಲ ಮಾಡುತ್ತದೆ.