ಮೊಂಡುತನದಲ್ಲಿ ಎರಡು ವಿಧವಿದೆ. ಸಕಾರಾತ್ಮಕ ಮೊಂಡುತನ ಯಶಸ್ಸಿಗೆ ಕಾರಣವಾಗುತ್ತದೆ. ಆದ್ರೆ ನಕಾರಾತ್ಮಕ ಮೊಂಡುತನ ಲಾಭಕಾರಕವಲ್ಲ. ಸಣ್ಣ ಸಣ್ಣ ವಿಷಯಕ್ಕೆ ಮೊಂಡುತನ ಮಾಡುವುದನ್ನು ನಕಾರಾತ್ಮಕ ಮೊಂಡುತನವೆಂದು ಪರಿಗಣಿಸಲಾಗುತ್ತದೆ.
ಸಾಮಾನ್ಯವಾಗಿ ಈ ರೀತಿ ಮೊಂಡುತನವನ್ನು ಮಕ್ಕಳಲ್ಲಿ ಕಾಣಬಹುದಾಗಿದೆ. ಮಂಗಳ ಹಾಗೂ ರಾಹು ಜಾತಕದಲ್ಲಿ ಕೆಟ್ಟ ಸ್ಥಾನದಲ್ಲಿದ್ದರೆ ಮಕ್ಕಳು ಈ ರೀತಿ ಮೊಂಡುತನ ಮಾಡ್ತಾರೆಂದು ಜ್ಯೋತಿಷ್ಯದಲ್ಲಿ ಹೇಳಲಾಗಿದೆ.
ಮಂಗಳ ಗ್ರಹ ಕೆಟ್ಟ ಸ್ಥಾನದಲ್ಲಿದ್ದರೆ ಆ ವ್ಯಕ್ತಿ 28-48 ವರ್ಷಗಳ ಕಾಲ ಕೆಟ್ಟ ಜೀವನ ನಡೆಸ್ತಾನೆ. ಅದೇ ರಾಹು ಗ್ರಹ ಕೆಟ್ಟ ಸ್ಥಾನದಲ್ಲಿದ್ದರೆ ಮನುಷ್ಯ 36-52 ವರ್ಷಗಳ ಕಾಲ ಕೆಟ್ಟ ಜೀವನ ನಡೆಸಬೇಕಾಗುತ್ತದೆ.
ಮಂಗಳ ಹಾಗೂ ರಾಹು ಕೆಟ್ಟದಾಗಿದ್ದರೆ ಮಕ್ಕಳು ಮೊಂಡುತನ, ಗಲಾಟೆ ಮಾಡುತ್ತಾರೆ. ಬೆಳ್ಳಿ ಮಕ್ಕಳನ್ನು ಶಾಂತವಾಗಿಡಲು ನೆರವಾಗುತ್ತದೆ. ಬೆಳ್ಳಿಯ ಆಭರಣ ಧರಿಸುವುದ್ರಿಂದ, ಬೆಳ್ಳಿ ಲೋಟದಲ್ಲಿ ನೀರು ಕುಡಿಯುವುದ್ರಿಂದ ಮನಸ್ಸು ಶಾಂತವಾಗಿರುತ್ತದೆ. ಮಕ್ಕಳ ಮನಸ್ಸನ್ನು ಶಾಂತಗೊಳಿಸಲು ಹಾಲಿಗೆ ಅಶ್ವಗಂಧ ಬೆರಸಿ ಕುಡಿಸಬೇಕು.
ಮಕ್ಕಳ ಹಠವನ್ನು ಕಡಿಮೆ ಮಾಡಲು ಒಣದ್ರಾಕ್ಷಿ, ದ್ರಾಕ್ಷಿಯನ್ನು ನೀಡುವುದು ಒಳ್ಳೆಯದೆಂದು ಪರಿಗಣಿಸಲಾಗಿದೆ. ಗ್ಯಾಸ್ ಹಾಗೂ ಪಿತ್ತವನ್ನು ಹೆಚ್ಚಿಸುವ ಆಹಾರವನ್ನು ಮೊಂಡುತನ ಮಾಡುವ ಮಕ್ಕಳಿಗೆ ನೀಡಬಾರದು.
ವಿಟಮಿನ್ ಹೆಚ್ಚಿಸುವ ಆಹಾರವನ್ನು ಮಕ್ಕಳಿಗೆ ನೀಡಬೇಕು. ಸಕ್ಕರೆ ಹಾಗೂ ಉಪ್ಪು ಹೆಚ್ಚಿರುವ ಆಹಾರವನ್ನು ಎಂದೂ ಮಕ್ಕಳಿಗೆ ನೀಡಬಾರದು. ಬಿಳಿ ಶ್ರೀಗಂಧ ಹಾಗೂ ಅರಿಶಿನದ ತಿಲಕವನ್ನು ಹಚ್ಚುವುದ್ರಿಂದಲೂ ಮೊಂಡುತನ ಕಡಿಮೆಯಾಗುತ್ತದೆ ಎಂದು ನಂಬಲಾಗಿದೆ.