ಕಿವಿ ಚುಚ್ಚಿಕೊಳ್ಳುವುದು ಭಾರತೀಯ ಸಂಸ್ಕೃತಿಯ ಒಂದು ಸಂಪ್ರದಾಯ. ಈ ಸಂಪ್ರದಾಯ ಶತಮಾನಗಳಿಂದಲೂ ಇದೆ. ಹಿಂದಿನ ಕಾಲದಲ್ಲಿ ಮಹಿಳೆಯರ ಜೊತೆ ಪುರುಷರು ಕೂಡ ಕಿವಿ ಚುಚ್ಚಿಸಿಕೊಳ್ಳುತ್ತಿದ್ದರು. ಈಗ ಮತ್ತೆ ಆ ಪದ್ಧತಿ ಬಂದಿದೆ.
ಜನರು ಸಂಪ್ರದಾಯ ಪಾಲನೆಗಾಗಿ ಕಿವಿ ಚುಚ್ಚಿಸಿಕೊಳ್ಳುತ್ತಿಲ್ಲ. ಫ್ಯಾಷನ್ ಗಾಗಿ ಕಿವಿ ಚುಚ್ಚಿಸಿಕೊಳ್ತಿದ್ದಾರೆ. ಆದ್ರೆ ಹಿಂದೆ ಸಂಪ್ರದಾಯ, ಈಗ ಫ್ಯಾಷನ್ ಆಗಿರುವ ಈ ಕಿವಿ ಚುಚ್ಚಿಸಿಕೊಳ್ಳುವ ಪದ್ಧತಿಯಿಂದ ಅನೇಕ ಲಾಭವಿದೆ.
ಆಕ್ಯುಪ್ರೆಷರ್ ತಜ್ಞರ ಪ್ರಕಾರ ಕಿವಿಯ ಕೊನೆಯಲ್ಲಿ Master Sensoral ಮತ್ತು Master cerebral ಹೆಸರಿನ ಎರಡು ಕಿವಿ ಲೋಬ್ಸ್ ಇರುತ್ತವೆ. ಆ ಜಾಗಕ್ಕೆ ಚುಚ್ಚಿದಾಗ ಕಿವುಡುತನ ದೂರವಾಗುತ್ತದೆ.
ಕಿವಿ ಚುಚ್ಚುವುದ್ರಿಂದ ಕಣ್ಣಿನ ದೃಷ್ಟಿ ಮತ್ತಷ್ಟು ಸ್ಪಷ್ಟವಾಗುತ್ತದೆ. ಕಿವಿಯ ಹಾಲೆ ಬಳಿ ಕಣ್ಣಿನ ನಾಳಗಳು ಹಾದು ಹೋಗಿರುತ್ತವೆ. ಆ ಭಾಗದಲ್ಲಿ ಕಿವಿ ಚುಚ್ಚುವುದ್ರಿಂದ ದೃಷ್ಟಿ ಹೊಳಪು ಪಡೆಯುತ್ತದೆ.
ಕಿವಿ ಚುಚ್ಚಿಕೊಳ್ಳುವುದ್ರಿಂದ ಒತ್ತಡ ಕೂಡ ಕಡಿಮೆಯಾಗುತ್ತದೆ. ಕಿವಿಯ ಕೆಳ ಭಾಗಕ್ಕೆ ಒತ್ತಡ ಬೀಳುವುದ್ರಿಂದ ಮಾನಸಿಕ ಒತ್ತಡ ಹಾಗೂ ಮಾನಸಿಕ ಸಮಸ್ಯೆ ದೂರವಾಗುತ್ತದೆ.
ಕಿವಿಯ ಹಾಲೆಗೂ ಮೆದುಳಿಗೂ ಸಂಬಂಧವಿದೆ. ಕಿವಿ ಚುಚ್ಚುವುದ್ರಿಂದ ಮೆದುಳು ಚುರುಕಾಗುತ್ತದೆ. ಹಾಗಾಗಿ ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳಿಗೆ ಕಿವಿ ಚುಚ್ಚಬೇಕು. ಇದ್ರಿಂದ ಅವರ ಬುದ್ದಿ ವೇಗವಾಗಿ ಬೆಳೆಯಲು ಸಹಾಯವಾಗುತ್ತದೆ.
ಕಿವಿ ಚುಚ್ಚುವುದ್ರಿಂದ ಜೀರ್ಣಕ್ರಿಯೆ ಸಮಸ್ಯೆ ದೂರವಾಗುವ ಜೊತೆಗೆ ಪಾರ್ಶ್ವವಾಯುವಿನಂತಹ ಅನೇಕ ಗಂಭೀರ ರೋಗಗಳು ಕಡಿಮೆಯಾಗುತ್ತವೆ.