ಸುಲಭವಾಗಿ ತೂಕ ಇಳಿಸಿಕೊಳ್ಳಲು ನೆರವಾಗುತ್ತೆ ಅಲೋವೆರಾ

ಅಲೋವೆರಾ ಚರ್ಮಕ್ಕೆ ತುಂಬಾ ಒಳ್ಳೆಯದು. ಇದು ಅನೇಕ ರೋಗಗಳನ್ನು ನಿವಾರಿಸುತ್ತದೆ. ತೂಕ ಕಡಿಮೆ ಮಾಡುವುದಕ್ಕೂ ಅಲೋವೆರಾ ರಾಮಬಾಣ.

ಅಲೋವೆರಾ ಸಿಪ್ಪೆ ತೆಗೆದು ಜೆಲ್ ಅನ್ನು ನೀರಿನಲ್ಲಿ ಬೆರೆಸಿ ಅಥವಾ ಹಾಗೆಯೇ ಕುಡಿಯಬಹುದು. ಇದರಲ್ಲಿ ಜೀವಸತ್ವ, ಖನಿಜ, ಕಿಣ್ವ, ಕಾರ್ಬೋ ಹೈಡ್ರೇಟ್, ಅಮೈನೋ ಆಮ್ಲ ಇರುತ್ತವೆ. ಸ್ಯಾಲಿಸಿಲಿಕ್ ಆಮ್ಲ ಮತ್ತು ಇತರ ಪೋಷಕಾಂಶಗಳು ಇದರಲ್ಲಿ ಇದ್ದು, ಅವು ತೂಕ ಕಳೆದುಕೊಳ್ಳಲು ಸಹಾಯಕವಾಗಿವೆ.

ಅಲೋವೆರಾವನ್ನು ಪ್ರತಿದಿನ ಸೇವಿಸುವುದರಿಂದ ತೂಕವೊಂದೇ ಅಲ್ಲ, ನಮ್ಮ ದೇಹದಲ್ಲಿರುವ ಅನೇಕ ರೋಗಗಳು ವಾಸಿಯಾಗುತ್ತವೆ. ಆದರೆ ಅಲೋವೆರಾವನ್ನು ಯಾವುದರ ಜೊತೆ ಸೇವಿಸುವುದು ಉತ್ತಮ ಎಂಬುದನ್ನು ನಾವು ತಿಳಿದುಕೊಳ್ಳಬೇಕು. ಜೊತೆಗೆ ಯಾವುದೇ ಪ್ರಯೋಗ ಮಾಡುವ ಮೊದಲು ಡಾಕ್ಟರ್ ಸಲಹೆ ಪಡೆದುಕೊಳ್ಳುವುದು ಅತೀ ಮುಖ್ಯ.

ಅಲೋವೆರಾ ಜೆಲ್ ಅನ್ನು ಯಾವುದೇ ಹಣ್ಣಿನ ಜ್ಯೂಸ್ ಜೊತೆ ಸೇರಿಸಿ ಕುಡಿಯಬಹುದು.

ಅಲೋವೆರಾ ಜೆಲ್ ಅನ್ನು ಹಾಗೇ ಅಥವಾ ನೀರಿನ ಸಹಾಯದಿಂದ ಕುಡಿಯಬಹುದು.

ನಿಂಬೆ ರಸದ ಜೊತೆ ಇದನ್ನು ಸೇರಿಸಿ, ಸ್ವಲ್ಪ ಜೇನುತುಪ್ಪ ಬೆರೆಸಿ ಕುಡಿಯಬಹುದು.

ತರಕಾರಿ, ಪಾನೀಯದ ಜೊತೆಯಲ್ಲಿಯೂ ಅಲೋವೆರಾವನ್ನು ಸೇವಿಸಬಹುದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read