alex Certify ನಿಮ್ಮ ಗಾರ್ಡನ್‌ ನಲ್ಲೇ ಸುಲಭವಾಗಿ ಬೆಳೆಸಿ ನಿತ್ಯ ಉಪಯೋಗಿಸುವ ಈ ಔಷಧೀಯ ಗಿಡ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿಮ್ಮ ಗಾರ್ಡನ್‌ ನಲ್ಲೇ ಸುಲಭವಾಗಿ ಬೆಳೆಸಿ ನಿತ್ಯ ಉಪಯೋಗಿಸುವ ಈ ಔಷಧೀಯ ಗಿಡ

ಅಜ್ಜ-ಅಜ್ಜಿ ಸಲಹೆ ಮಹಳ ಮಹತ್ವದ್ದು. ಅವ್ರು ಹೇಳಿದಂತೆ ಮನೆ ಮದ್ದು ಮಾಡಿದ್ರೆ ಸಣ್ಣಪುಟ್ಟ ಅನೇಕ ಕಾಯಿಲೆಗಳು ಕೆಲವೇ ದಿನಗಳಲ್ಲಿ ಮಂಗಮಾಯ. ಅಜ್ಜ-ಅಜ್ಜಿ ಸಲಹೆಯಂತೆ ಕಿಚನ್ ಗಾರ್ಡನ್ ನಲ್ಲಿ ಕೆಲವೊಂದು ಸಸಿಗಳಿದ್ದರೆ ಆ ಮನೆ ಜನರ ಬಳಿ ರೋಗ ಸುಳಿಯುವುದಿಲ್ಲ. ನಿಮ್ಮ ಮನೆಯಲ್ಲೂ ಗಾರ್ಡನ್ ಇದ್ದರೆ ಅಲ್ಲಿ ಈ ಗಿಡಗಳನ್ನು ಅವಶ್ಯವಾಗಿ ಬೆಳೆದು ಅದ್ರ ಉಪಯೋಗ ಪಡೆಯಿರಿ.

ತುಳಸಿ : ತುಳಸಿ ಎಲ್ಲ ಕಡೆ ಸಿಗುವ ಸಸಿ. ಇದನ್ನು ಮನೆಯಲ್ಲಿ ಸುಲಭವಾಗಿ ಬೆಳೆಸಬಹುದು. ಶೀತ, ಕೆಮ್ಮ ಸೇರಿದಂತೆ ಅನೇಕ ರೋಗಗಳಿಗೆ ತುಳಸಿ ಮನೆ ಮದ್ದು.

ಮೆಹಂದಿ : ಶೀತವಾಗಿದ್ದರೆ ಮೆಹಂದಿ ಎಲೆಯನ್ನು ನೀರಿನಲ್ಲಿ ಕುದಿಸಿ ಆ ನೀರನ್ನು ಕುಡಿಯುವುದ್ರಿಂದ ಶೀತ ಕಡಿಮೆಯಾಗುತ್ತದೆ. ಮೆಹಂದಿ ಎಲೆಗಳು ಸುಟ್ಟ ಗಾಯವನ್ನು ಕಡಿಮೆ ಮಾಡುವ ಗುಣ ಹೊಂದಿದೆ.

ನಿಂಬೆ : ನಿಂಬೆ ಗಿಡವನ್ನು ಸುಲಭವಾಗಿ ಮನೆಯಲ್ಲಿ ಬೆಳೆಸಬಹುದು. ನಿಂಬೆಯಲ್ಲಿ ಪ್ರತಿರಕ್ಷಣಾ ವ್ಯವಸ್ಥೆ ಹೆಚ್ಚಿಸುವ ಶಕ್ತಿಯಿದೆ. ನಿಂಬೆಯಲ್ಲಿ ವಿಟಮಿನ್ ಸಿ ಅಂಶ ಹೆಚ್ಚಿರುತ್ತದೆ. ಜೀರ್ಣಶಕ್ತಿಯನ್ನು ನಿಂಬೆ ಸರಿಯಾಗಿಡುತ್ತದೆ.

ಬ್ರಾಹ್ಮಿ : ಬ್ರಾಹ್ಮಿ ಸಾಮಾನ್ಯವಾಗಿ ಎಲ್ಲೆಡೆ ಸಿಗುವಂತಹದ್ದು. ನರಗಳಿಗೆ ಇದು ಪ್ರಯೋಜನಕಾರಿ. ಇದನ್ನು ಸೇವನೆ ಮಾಡುವುದ್ರಿಂದ ಸ್ಮರಣ ಶಕ್ತಿ ಹೆಚ್ಚಾಗುತ್ತದೆ. ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಯನ್ನು ಕಡಿಮೆ ಮಾಡುತ್ತದೆ.

ಅಲೋವೇರಾ : ಮನೆಯಲ್ಲಿ ಇದನ್ನು ಸುಲಭವಾಗಿ ಬೆಳೆಯಬಹುದು. ಅನೇಕ ಕಾಯಿಲೆಗಳನ್ನು ಗುಣಪಡಿಸುವ ಶಕ್ತಿ ಅಲೋವೇರಾಕ್ಕಿದೆ.

ದೊಡ್ಡಪತ್ರೆ : ಇದೂ ಕೂಡ ಮನೆಯಂಗಳದಲ್ಲಿ ಅಥವಾ ಪಾಟ್‌ ನಲ್ಲಿ ಸುಲಭವಾಗಿ ಬೆಳೆಯಬಹುದು, ಇದು ರೋಗ ನಿರೋಧಕ ಶಕ್ತಿ ಹೆಚ್ಚಿಸಿ ಶೀತ, ಕೆಮ್ಮಿಗೆ ರಾಮಬಾಣವಾಗಿದೆ.

ಈ ಎಲ್ಲ ಔಷಧಿ ಸಸಿಗಳನ್ನು ಮನೆಯಲ್ಲಿ ಬೆಳೆಸಿ ಕಾಯಿಲೆಗೆ ಹೇಳಿ ಗುಡ್ ಬೈ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...