ಹೀಗೆ ಮಾಡಿದ್ರೆ ನಾಲ್ಕೇ ದಿನದಲ್ಲಿ ಕಡಿಮೆಯಾಗುತ್ತೆ ಚಳಿಗಾಲದಲ್ಲಿ ʼಕೂದಲುʼ ಉದುರುವ ಸಮಸ್ಯೆ

ಚಳಿಗಾಲ ಶುರುವಾಗ್ತಿದ್ದಂತೆ ಕೂದಲು ಉದುರುವ ಸಮಸ್ಯೆ ಕೂಡ ಹೆಚ್ಚಾಗುತ್ತದೆ. ಚರ್ಮದ ಆರೈಕೆ ಜೊತೆಗೆ ಕೂದಲಿನ ಆರೈಕೆ ಬಹಳ ಮುಖ್ಯವಾಗುತ್ತದೆ. ಚಳಿಗಾಲದಲ್ಲಿ ತಲೆ ಹೊಟ್ಟು, ತಲೆಯಲ್ಲಿ ಗುಳ್ಳೆ, ಕೂದಲು ಎಣ್ಣೆಯುಕ್ತವಾಗುವುದು ಸಾಮಾನ್ಯ.

ಕೂದಲು ಉದುರುತ್ತಿದ್ದಂತೆ ಮಾರುಕಟ್ಟೆಗೆ ಓಡುವ ಜನರು ಅಲ್ಲಿ ಸಿಗುವ ಬಗೆ ಬಗೆಯ ರಾಸಾಯನಿಕ ಉತ್ಪನ್ನಗಳನ್ನು ಬಳಸಲು ಶುರುಮಾಡ್ತಾರೆ. ಆದ್ರೆ ಮನೆಯಲ್ಲಿಯೇ ಸಿಗುವ ವಸ್ತುಗಳನ್ನು ಬಳಸಿ ಚಳಿಗಾಲದಲ್ಲಿ ಕೂದಲು ಆರೈಕೆ ಮಾಡಿಕೊಂಡಲ್ಲಿ ಅಡ್ಡ ಪರಿಣಾಮವಿಲ್ಲದೆ ಕೂದಲುದುರುವ ಸಮಸ್ಯೆಯನ್ನು ದೂರ ಮಾಡಬಹುದಾಗಿದೆ.

ಈರುಳ್ಳಿ ರಸ : ಈರುಳ್ಳಿ ರಸವನ್ನು ಕೂದಲಿಗೆ ಹಚ್ಚಿ 15 ನಿಮಿಷ ಬಿಡಿ. ನಂತ್ರ ತಣ್ಣನೆಯ ನೀರಿನಲ್ಲಿ ಕೂದಲು ಸ್ವಚ್ಛಗೊಳಿಸಿ. ವಾರದಲ್ಲಿ 2 ಬಾರಿ ಹೀಗೆ ಮಾಡುವುದ್ರಿಂದ ಕೂದಲು ಉದುರುವುದು ಕಡಿಮೆಯಾಗುತ್ತದೆ.

ನೆಲ್ಲಿಕಾಯಿ ರಸ : ಪ್ರತಿ ದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೆಲ್ಲಿಕಾಯಿ ರಸ ಸೇವನೆ ಮಾಡುವುದ್ರಿಂದಲೂ ತಲೆ ಕೂದಲು ಉದುರುವ ಸಮಸ್ಯೆ ಕಡಿಮೆಯಾಗುತ್ತದೆ.

ವಿಟಮಿನ್ ಇ : ರಾತ್ರಿ ಮಲಗುವ ಮೊದಲು ತೆಂಗಿನ ಎಣ್ಣೆಗೆ ವಿಟಮಿನ್ ಇ ಮಾತ್ರೆಯನ್ನು ಬೆರೆಸಿ ತಲೆಗೆ ಹಚ್ಚಿಕೊಳ್ಳಿ. ವಾರಕ್ಕೆ ನಾಲ್ಕು ದಿನ ಸತತವಾಗಿ ಹೀಗೆ ಮಾಡಿದಲ್ಲಿ ಸಮಸ್ಯೆ ಕಡಿಮೆಯಾಗುತ್ತದೆ.

ದಾಲ್ಚಿನಿ : ದಾಲ್ಚಿನಿಗೆ ಜೇನು ತುಪ್ಪ ಸೇರಿಸಿ ಸರಿಯಾಗಿ ಮಿಕ್ಸ್ ಮಾಡಿ. ನಂತ್ರ ಈ ಮಿಶ್ರಣವನ್ನು ತಲೆಗೆ ಹಚ್ಚಿ 20-25 ನಿಮಿಷ ಬಿಟ್ಟು ಬೆಚ್ಚಗಿನ ನೀರಿನಲ್ಲಿ ತೊಳೆದುಕೊಳ್ಳಿ. ವಾರದಲ್ಲಿ 2 ದಿನ ಹೀಗೆ ಮಾಡಿದ್ರೆ ಪರಿಣಾಮ ಕಾಣಲು ಶುರುವಾಗುತ್ತದೆ,

ಪಪ್ಪಾಯ : ಪಪ್ಪಾಯ ಕಾಯಿಯನ್ನು ರುಬ್ಬಿ ತಲೆಗೆ ಹಚ್ಚಿ 10-15 ನಿಮಿಷ ಹಾಗೆ ಬಿಡಿ. ಇದು ಕೂದಲು ಉದುರುವುದನ್ನು ಕಡಿಮೆ ಮಾಡುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read