ಗರ್ಭಿಣಿಯಾದಾಗ ತೂಕ ಏರೋದು ಸಾಮಾನ್ಯ ಸಂಗತಿ. ಆದ್ರೆ ತೂಕ ಮಿತಿ ಮೀರಿದ್ರೆ ಹೆರಿಗೆ ಕಷ್ಟವಾಗುತ್ತದೆ. ಗರ್ಭಿಣಿಯಾದಾಗ ಇಬ್ಬರ ಹೆಸರಲ್ಲಿ ಆಹಾರ ಸೇವನೆ ಮಾಡುವುದ್ರಿಂದ ತೂಕ ಏರಿಕೆಯಾಗುತ್ತದೆ. ಗರ್ಭಧಾರಣೆ ನಂತ್ರ ಸಮತೋಲಿತ ಆಹಾರದ ಜೊತೆ ವ್ಯಾಯಾಮ ಮಾಡುವುದ್ರಿಂದ ತೂಕವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದಾಗಿದೆ.
ಗರ್ಭಿಣಿಯರ ಆಹಾರದಲ್ಲಿ ಫೈಬರ್ ಇರಲಿ. ಧಾನ್ಯ, ಹಣ್ಣುಗಳು, ಕಂದು ಅಕ್ಕಿಯನ್ನು ತಪ್ಪದೆ ಸೇವನೆ ಮಾಡಿ. ಓಟ್ಸ್, ಬಾರ್ಲಿಯಲ್ಲಿ ಕೂಡ ಫೈಬರ್ ಹೆಚ್ಚಿನ ಪ್ರಮಾಣದಲ್ಲಿದೆ. ಇದು ಹೆರಿಗೆ ನಂತ್ರವೂ ನಿಮ್ಮ ತೂಕ ಇಳಿಕೆಗೆ ನೆರವಾಗುತ್ತದೆ.
ನಾಲ್ಕು ಪ್ಲೇಟ್ ಹಣ್ಣನ್ನು ಪ್ರತಿದಿನ ತಿನ್ನಬೇಕು. ಗರ್ಭಿಣಿಯಾದವರು ತೂಕ ನಿಯಂತ್ರಿಸಿಕೊಳ್ಳಲು ಅವಶ್ಯವಾಗಿ ನೀರನ್ನು ಕುಡಿಯಬೇಕು. ಆಹಾರ ಸೇವನೆಗಿಂತ ಸ್ವಲ್ಪ ಸಮಯ ಮೊದಲು ನೀರನ್ನು ಕುಡಿದಲ್ಲಿ ಆಹಾರ ಸೇವನೆ ಪ್ರಮಾಣ ಕಡಿಮೆಯಾಗುತ್ತದೆ. ನೀರು ಹಸಿವೆಯನ್ನು ಕಡಿಮೆ ಮಾಡುವ ಗುಣ ಹೊಂದಿದೆ.
ಗರ್ಭಧಾರಣೆ ನಂತ್ರ ವಾರದಲ್ಲಿ ಒಮ್ಮೆಯಾದ್ರೂ ಸೂಪ್ ಸೇವನೆ ಮಾಡಿ. ಸೂಪ್ ಪೌಷ್ಠಿಕಾಂಶದಿಂದ ಕೂಡಿರುವ ಜೊತೆಗೆ ತೂಕ ಇಳಿಸಿಕೊಳ್ಳಲು ನೆರವಾಗುತ್ತದೆ.
ಮಧ್ಯಾಹ್ನದ ಊಟ ಭರ್ಜರಿಯಾಗಿದ್ದರೆ ರಾತ್ರಿ ಕಡಿಮೆ ಆಹಾರ ಸೇವನೆ ಮಾಡಿ. ಹಿತವೆನಿಸಿದ್ರೆ ಸ್ವಲ್ಪ ಹಣ್ಣು ಹಾಗೂ ಹಾಲು ಸೇವಿಸಿ ಮಲಗಬಹುದು.