ಬೆಂಗಳೂರು : 2025-26ನೇ ಶೈಕ್ಷಣಿಕ ಸಾಲಿಗೆ ಸರ್ಕಾರಿ ಕಾಲೇಜುಗಳಲ್ಲಿನ ಹೆಚ್ಚುವರಿ ಬೋಧನಾ ಕಾರ್ಯಭಾರಕ್ಕೆ ಅತಿಥಿ ಉಪನ್ಯಾಸಕರನ್ನು ತಾತ್ಕಾಲಿಕವಾಗಿ ಆಯ್ಕೆ ಮಾಡಿಕೊಳ್ಳುವ ಬಗ್ಗೆ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.
2025-26ನೇ ಶೈಕ್ಷಣಿಕ ಸಾಲಿನಲ್ಲಿ ಅತಿಥಿ ಉಪನ್ಯಾಸಕರ ಆಯ್ಕೆ ಸಂಬಂಧ ಹೊರಡಿಸಲಾಗಿರುವ ಉಲ್ಲೇಖಿತ ಈ ಕಛೇರಿಯ ಸುತ್ತೋಲೆಯಲ್ಲಿನ ನಿಬಂಧನೆಗಳ ಕ್ರಮ ಸಂಖ್ಯೆ (19) ರಲ್ಲಿ ‘ಅತಿಥಿ ಉಪನ್ಯಾಸಕರಿಗೆ ಕಲಾ/ವಾಣಿಜ್ಯ/ನಿರ್ವಹಣೆ ಭಾಷಾ ವಿಷಯಗಳಲ್ಲಿ ಕನಿಷ್ಠ 04 ಗಂಟೆಗಳು ಹಾಗೂ ವಿಜ್ಞಾನ ವಿಷಯ/ಪ್ರಾಯೋಗಿಕ ತರಗತಿಗಳಿರುವ ವಿಷಯಗಳಿಗೆ ಕನಿಷ್ಠ 05 ಗಂಟೆಗಳ ಕಾರ್ಯಭಾರ’ ಎಂದಿರುವುದನ್ನು “ಅತಿಥಿ ಉಪನ್ಯಾಸಕರಿಗೆ ಕಲಾ/ವಾಣಿಜ್ಯ/ನಿರ್ವಹಣೆ ಭಾಷಾ ವಿಷಯಗಳಿಗೆ ಹಾಗೂ ವಿಜ್ಞಾನ ವಿಷಯ/ಪ್ರಾಯೋಗಿಕ ತರಗತಿಗಳಿರುವ ವಿಷಯಗಳಿಗೆ ಕನಿಷ್ಠ 04 ಗಂಟೆಗಳ ಕಾರ್ಯಭಾರ” ಎಂಬುದಾಗಿ ತಿದ್ದಿ ಓದಿಕೊಳ್ಳತಕ್ಕದ್ದು ಎಂದು ತಿಳಿಸಿದೆ.

