ಬೆಂಗಳೂರು : ಮಾಜಿ ಸಚಿವ ಹೆಚ್.ಎಮ್ ರೇವಣ್ಣನ ಪುತ್ರನ ಕಾರು ಅಪಘಾತಕ್ಕೀಡಾಗಿ ಬೈಕ್ ಸವಾರ ಮೃತಪಟ್ಟ ಘಟನೆ ನಡೆದಿದೆ. ಬೆಂಗಳೂರು ದಕ್ಷಿಣ ತಾಲೂಕಿನ ಮಾಗಡಿ ತಾಲೂಕಿನ ಗುಡೇಮಾರನಹಳ್ಳಿ ಬಳಿ ಈ ಘಟನೆ ನಡೆದಿದೆ.
ಬೈಕ್ ಸವಾರ ರಾಜೇಶ್ ರೇವಣ್ಣನ ಪುತ್ರನ ಕಾರಿಗೆ ಡಿಕ್ಕಿ ಹೊಡೆದಿದ್ದಾನೆ ಎನ್ನಲಾಗಿದೆ. ಹೇಗೆ ಅಪಘಾತ ನಡೆಯಿತು ಎಂದು ಯಾವುದೇ ಸ್ಪಷ್ಟ ಮಾಹಿತಿ ಇಲ್ಲ.ಬೈಕ್ ಚಲಾಯಿಸುತ್ತಿದ್ದ ರಾಜೇಶ್ ಎಂಬ ಯುವಕ ಅಪಘಾತದಲ್ಲಿ ಮೃತಪಟ್ಟಿದ್ದು, ಇಂದು ಬೆಳಗ್ಗೆ 10:30 ಕ್ಕೆ ಅಪಘಾತ ಘಟನೆ ಸಂಭವಿಸಿದೆ.
ರೇವಣ್ಣ ಪುತ್ರ ಶಶಾಂಕ್ ಗೆ ಸೇರಿದ ಕಾರು ಡಿಕ್ಕಿಯಾಗಿ ಬೈಕ್ ಸವಾರ ರಾಜೇಶ್ (27) ಮೃತಪಟ್ಟಿದ್ದಾರೆ. ಮೃತ ಯುವಕ ಮಾಗಡಿ ತಾಲೂಕಿನ ಬೆಳಗುಂಬ ಗ್ರಾಮದ ನಿವಾಸಿ ಎಂದು ಗುರುತಿಸಲಾಗಿದೆ. ಅಪಘಾತಕ್ಕೀಡಾದ ಕಾರು ಶಶಾಂಕ್ ಅವರ ಹೆಸರಿನಲ್ಲಿ ನೋಂದಾವಣಿಯಾಗಿದೆ. ಕಾರನ್ನು ಅವರ ಚಾಲಕ ಓಡಿಸುತ್ತಿದ್ದರು ಎಂಬ ಮಾಹಿತಿಯಿದೆ.
”ಕಾರು ಓಡಿಸಿದ್ದು ನನ್ನ ಮಗ ಅಲ್ಲ, ನಮ್ಮ ಡ್ರೈವರ್. ಮೃತ ಯುವಕನ ಕುಟುಂಬದವರ ಜೊತೆ ನಾನು ಮಾತನಾಡುತ್ತೇನೆ ಎಂದು” ಹೆಚ್.ಎಮ್ ರೇವಣ್ಣ ಮಾಧ್ಯಮವೊಂದಕ್ಕೆ ಈ ಕುರಿತು ಸ್ಪಷ್ಟನೆ ನೀಡಿದ್ದಾರೆ.
