ಮಕ್ಕಳಿಗೆ ಬುದ್ದಿ ಹೇಳಿ ವಿದ್ಯಾರ್ಥಿಗಳನ್ನ ಸರಿದಾರಿಗೆ ತರುವ ಮಹತ್ವದ ಜವಾಬ್ದಾರಿ ಶಿಕ್ಷಕರದ್ದು. ಆದರೆ ಶಿಕ್ಷಕರೇ ಇಂತಹ ಕೆಲಸ ಮಾಡಿದ್ರೆ ಮಕ್ಕಳ ಕಥೆ ಏನು..?ಹೌದು. ಮಹಾರಾಷ್ಟ್ರದ ಶಾಲೆಯೊಂದರಲ್ಲಿ ಶಿಕ್ಷಕ ಮದ್ಯ ಕುಡಿದು ಟೈಟಾಗಿ ನೃತ್ಯ ಮಾಡುತ್ತಾ ವಿಚಿತ್ರವಾಗಿ ವರ್ತಿಸಿದ್ದಾರೆ. ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರ ಕಣ್ಣು ಕೆಂಪಾಗಿಸಿದೆ.
ನಾಂದೇಡ್ ಜಿಲ್ಲೆಯ ಶೋಕಾಪುರ್ ಗವಟಿಲ್ ಜಿಲ್ಲೆಯ ಮಹೂರ್ ತಾಲ್ಲೂಕಿನಲ್ಲಿ, ಜಿಲ್ಲಾ ಪರಿಷತ್ ಶಾಲೆಯ ಶಿಕ್ಷಕನೊಬ್ಬ ಕುಡಿದ ಮತ್ತಿನಲ್ಲಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋ ವೈರಲ್ ಆಗಿದೆ.
ಘಟನೆಯ ನಂತರ, ಪೋಷಕರು ಮತ್ತು ಗ್ರಾಮಸ್ಥರಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಸಂಬಂಧಪಟ್ಟ ಶಿಕ್ಷಕನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಶಾಲೆಯಂತಹ ಸೂಕ್ಷ್ಮ ಸ್ಥಳದಲ್ಲಿ ನಡೆಯುತ್ತಿರುವ ಇಂತಹ ಘಟನೆ ವಿದ್ಯಾರ್ಥಿಗಳ ಸುರಕ್ಷತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಪ್ರಸ್ತುತ ಪ್ರಕರಣದ ತನಿಖೆ ನಡೆಯುತ್ತಿದ್ದು, ಮುಂದಿನ ಕ್ರಮಕ್ಕಾಗಿ ಕಾಯಲಾಗುತ್ತಿದೆ.
Nanded | शिक्षकी पेशाला काळिमा! दारू पिऊन शाळेत शिक्षकाचा धिंगाणा; विद्यार्थ्यांसोबतही गैरवर्तन#Nanded #MaharashtraNews #DailyNewsUpdates pic.twitter.com/f8qPkwmmNx
— Navarashtra (@navarashtra) December 7, 2025
