SHOCKING : ಸರ್ಕಾರಿ ಕೆಲಸ ಸಿಗದಿದ್ದಕ್ಕೆ ಮನನೊಂದು  ದಾವಣಗೆರೆಯಲ್ಲಿ ಯುವಕ ಆತ್ಮಹತ್ಯೆ.!

ದಾವಣಗೆರೆ : ಸರ್ಕಾರಿ ಕೆಲಸ ಸಿಗದಿದ್ದಕ್ಕೆ ಮನನೊಂದು ಯುವಕ ಆತ್ಮಹತ್ಯೆ ಮಾಡಿಕೊಂಡ ಘಟನೆ ದಾವಣಗೆರೆಯಲ್ಲಿ ನಡೆದಿದೆ.

ಮೃತನನ್ನು ಜಗಳೂರು ತಾಲೂಕಿನ ಗುಡ್ಡದಲಿಂಗಣ್ಣ ಹಳ್ಳಿಯ ಯುವಕ ಅಂಜಿನಪ್ಪ (26) ಎಂದು ಗುರುತಿಸಲಾಗಿದೆ.
ಪದವಿ ಮುಗಿಸಿದ ಅಂಜಿನಪ್ಪ ಸ್ಪರ್ಧಾತ್ಮಕ ಪರೀಕ್ಷೆಗಾಗಿ ಹಗಲಿದುರುಳು ಕಷ್ಟಪಟ್ಟು ಓದುತ್ತಿದ್ದರು. ಆದರೆ ಎಷ್ಟೇ ಪ್ರಯತ್ನಪಟ್ಟರೂ ಕೆಲಸ ಸಿಗಲಿಲ್ಲ. ಇದರಿಂದ ಬಹಳ ನೊಂದಿದ್ದ ಯುವಕ ಸ್ನೇಹಿತರ ಹತ್ತಿರ ಬೇಸರಹೊರ ಹಾಕಿದ್ದನು.

ಕಳೆದ ರಾತ್ರಿ ಸೀರೆಯನ್ನು ತೆಗೆದುಕೊಂಡು ರೂಮಿಗೆ ಹೋದ ಯುವಕ ಸೀರೆಯಿಂದಲೇ ಬಿಗಿದುಕೊಂಡು ಸೂಸೈಡ್ ಮಾಡಿಕೊಂಡಿದ್ದಾನೆ. ಘಟನೆ ಸಂಬಂಧ ಬಿಳಿಚೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read