ಪೋಷಕರೇ ಗಮನಿಸಿ : ಮಕ್ಕಳಿಗೆ ಗುಡ್ ಟಚ್ , ಬ್ಯಾಡ್ ಟಚ್ ಯಾವುದು ಎಂದು ಜಸ್ಟ್ ಹೀಗೆ ತಿಳಿಸಿ |WATCH VIDEO

ನಮ್ಮ ಸಮಾಜದಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಅಪರಾಧಗಳ ಸಂಖ್ಯೆ ಹೆಚ್ಚಾಗಿದೆ. ಪರಿಚಿತರ ಬಳಿ ಮಕ್ಕಳನ್ನು ಬಿಡುವುದೂ ಕಷ್ಟವಾಗಿದೆ. ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚಾಗ್ತಿವೆ. ಮಕ್ಕಳು ಎಲ್ಲರನ್ನೂ ಬೇಗ ನಂಬುವ ಕಾರಣ ಅವ್ರು ಈ ದೌರ್ಜನ್ಯಕ್ಕೆ ಬೇಗ ಒಳಗಾಗ್ತಾರೆ. ಮಕ್ಕಳಿಗೆ ಇದ್ರ ಬಗ್ಗೆ ತಿಳಿಸುವ ಅಗತ್ಯತೆ ಈಗ ಹೆಚ್ಚಿದೆ. ಮಕ್ಕಳಿಗೆ ಗುಡ್ ಟಚ್ ಹಾಗೂ ಬ್ಯಾಡ್ ಟಚ್ ಬಗ್ಗೆ ಹೇಳಬೇಕಾಗುತ್ತದೆ.

ಸಾಮಾನ್ಯವಾಗಿ ಹಿರಿಯರಿಗೆ ಗೌರವ ನೀಡುವುದ್ರಿಂದ ಹಿಡಿದು ಶಿಕ್ಷಣ, ಆಹಾರ, ಬಟ್ಟೆ ಎಲ್ಲದರ ಬಗ್ಗೆಯೂ ಪಾಲಕರು ಮಕ್ಕಳಿಗೆ ಮಾಹಿತಿ ನೀಡುತ್ತಾರೆ. ಆದ್ರೆ ಲೈಂಗಿಕ ಶಿಕ್ಷಣದ ಬಗ್ಗೆ ಮಾಹಿತಿ ನೀಡಲು ಹಿಂಜರಿಯುತ್ತಾರೆ. ಮಕ್ಕಳಿಗೆ ಇದ್ರ ಬಗ್ಗೆ ಅಗತ್ಯವಾಗಿ ತಿಳಿಸಬೇಕಾಗುತ್ತದೆ. ಮೊದಲನೆಯದಾಗಿ ಮಕ್ಕಳು ಹಾಗೂ ಪಾಲಕರ ಮಧ್ಯೆ ಪ್ರೀತಿ, ವಿಶ್ವಾಸವಿರಬೇಕು. ಮಕ್ಕಳು ಎಲ್ಲ ವಿಷ್ಯವನ್ನು ನಿಮ್ಮ ಮುಂದೆ ಭಯವಿಲ್ಲದೆ ಹೇಳಬೇಕು. ಮಕ್ಕಳು ತಪ್ಪು ಮಾಡಿದಾಗ ಹೊಡೆಯುವುದೆ ಸರಿ ಯಾವುದು ಎಂಬುದನ್ನು ತಿಳಿಸಿ ಹೇಳಿದಾಗ ಅವರಿಗೆ ಪಾಲಕರ ಮೇಲೆ ವಿಶ್ವಾಸ ಬರುತ್ತದೆ. ಯಾವುದೇ ವಿಷ್ಯವನ್ನು ಭಯವಿಲ್ಲದೆ ಹೇಳ್ತಾರೆ.

ದೇಹದ ಅಂಗಗಳ ಬಗ್ಗೆ ಅವರಿಗೆ ಹೇಳಬೇಕು. ಯಾವ ಅಂಗವನ್ನು ಎಲ್ಲರೂ ನೋಡಬಹುದು, ಹಾಗೆ ಯಾವ ಅಂಗವನ್ನು ನಾವು ಮಾತ್ರ ನೋಡಬಹುದು ಮತ್ತು ಸ್ಪರ್ಶಿಸಬಹುದು ಎಂಬುದನ್ನು ಮಕ್ಕಳಿಗೆ ಹೇಳಬೇಕು. ಖಾಸಗಿ ಅಂಗಗಳು ಯಾವುದು ಎಂಬುದನ್ನು ಹೇಳಬೇಕು. ಯಾವುದೇ ಪರಿಚಿತನಿರಲಿ ಇಲ್ಲ ಅಪರಿಚಿತನಿರಲಿ ಖಾಸಗಿ ಅಂಗವನ್ನು ಸ್ಪರ್ಶಿಸಿದ್ರೆ ಅಥವಾ ನಿಮಗೆ ಹಿತವಲ್ಲದ ರೀತಿಯಲ್ಲಿ ಸ್ಪರ್ಶಿಸಿದ್ರೆ ತಕ್ಷಣ ಪಾಲಕರಿಗೆ ಹೇಳುವಂತೆ ಮಕ್ಕಳಿಗೆ ಹೇಳಬೇಕು.

3-4 ವರ್ಷದ ಮಕ್ಕಳಿಗೆ ನಿಮ್ಮ ದೇಹದ ಮೇಲೆ ನಿಮಗೆ ಮಾತ್ರ ಹಕ್ಕಿದೆ ಎಂಬುದನ್ನು ಮನವರಿಕೆ ಮಾಡಿ. ನಿಮ್ಮ ದೇಹವನ್ನು ಯಾರಾದ್ರೂ ಬಲವಂತವಾಗಿ ಮುಟ್ಟಿದ್ರೆ ಅದನ್ನು ವಿರೋಧಿಸುವಂತೆ ಹೇಳಿ.
ಪಾಲಕರು ಹತ್ತಿರವಿಲ್ಲದ ಸ್ಥಳದಲ್ಲಿ ಕೆಟ್ಟದಾಗಿ ನಡೆದುಕೊಳ್ಳಲು ಮುಂದಾದ್ರೆ ಅದನ್ನು ವಿರೋಧಿಸಿ ಕಿರುಚಿಕೊಳ್ಳುವಂತೆ ಮಕ್ಕಳಿಗೆ ಹೇಳಿ. ಸುತ್ತಲು ನಾಲ್ಕು ಜನರು ಸೇರಿದಾಗ ಏನಾಯ್ತು ಎಂಬುದನ್ನು ಧೈರ್ಯವಾಗಿ ಹೇಳಲು ಸಲಹೆ ನೀಡಿ.

ಮಕ್ಕಳ ಮನಸ್ಸನ್ನು ಓದಲು ಕಲಿತುಕೊಳ್ಳಿ. ಮಕ್ಕಳು ತಪ್ಪು ಮಾಡಿದಾಗ ಅವ್ರ ನಡವಳಿಕೆಯಲ್ಲಿ ಬದಲಾವಣೆ ಕಂಡು ಬರುತ್ತದೆ. ಅದನ್ನು ಗುರುತಿಸಿ, ಸಮಸ್ಯೆ ಏನಾಗಿದೆ ಎಂಬುದನ್ನು ಪತ್ತೆ ಮಾಡಿ.

ಇಂಟರ್ನೆಟ್ ನಲ್ಲಿ ಪ್ರತಿನಿತ್ಯ ಹಲವರು ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಇದೀಗ ವೈರಲ್ ಆಗಿರುವ ವಿಡಿಯೋ ಖಂಡಿತಾ ನಿಮ್ಮ ಮನಗೆಲ್ಲುತ್ತದೆ. ರೋಶನ್ ರೈ ಅವರು ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದ ವಿಡಿಯೋದಲ್ಲಿ, ಮಹಿಳಾ ಶಿಕ್ಷಕಿಯೊಬ್ಬರು ತಮ್ಮ ವಿದ್ಯಾರ್ಥಿಗಳಿಗೆ ‘ಗುಡ್ ಟಚ್’ ಮತ್ತು ‘ಬ್ಯಾಡ್ ಟಚ್’ ಎಂಬ ಪರಿಕಲ್ಪನೆಯ ಬಗ್ಗೆ ಶಿಕ್ಷಣ ನೀಡುತ್ತಿದ್ದಾರೆ.

ಶಿಕ್ಷಕಿಯ ಈ ಶಿಕ್ಷಣವು ಇಂದಿನ ದಿನಗಳಲ್ಲಿ ಬಹಳ ಮುಖ್ಯವಾಗಿದೆ. ದೇಶದಲ್ಲಿ ಅಪ್ರಾಪ್ತರ ಮೇಲೆ ಲೈಂಗಿಕ ದೌರ್ಜನ್ಯ ನಡೆಯುತ್ತಿರುವ ಇಂಥ ಕಾಲಘಟ್ಟದಲ್ಲಿ ಮಕ್ಕಳಿಗೆ ಈ ಶಿಕ್ಷಣ ಅತ್ಯಂತ ಅಗತ್ಯವಾಗಿದೆ. ಇದನ್ನು ಭಾರತದಾದ್ಯಂತ ಎಲ್ಲಾ ಶಾಲೆಗಳಲ್ಲಿ ಮಾಡಬೇಕು. ನಿಮಗೆ ಎಷ್ಟು ಸಾಧ್ಯವೋ ಅಷ್ಟು ಶೇರ್ ಮಾಡಿ ಎಂದು ಈ ಪೋಸ್ಟ್ ಗೆ ಶೀರ್ಷಿಕೆ ನೀಡಿ ಹಂಚಿಕೊಳ್ಳಲಾಗಿದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read