ನವದೆಹಲಿ: ಇಂಡೀಗೋ ವಿಮಾನ ಕಾರ್ಯಾಚರಣೆಯಲ್ಲಿ ಉಂಟಾದ ವ್ಯತ್ಯಯದ ಬಗ್ಗೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ ನೀಡಿದ್ದ ನೋಟಿಸ್ ಗೆ ಇಂಡೀಗೋ ಸಂಸ್ತ್ಗೆ ಇನ್ನೂ ಉತ್ತರ ನೀಡಿಲ್ಲ.
ಡಿಜಿಸಿಎ ನೀಡಿದ್ದ ಶೋಕಾಸ್ ನೋಟಿಸ್ ಗೆ ಪ್ರತಿಕ್ರಿಯಿಸಿರುವ ಇಂಡಿಗೋ ಸಂಸ್ಥೆ, ಇಷ್ಟು ಕಡಿಮೆ ಸಮಯದಲ್ಲಿ ನಿಖರ ಕಾರಣ ಹೇಳಲು ಸಾಧ್ಯವಿಲ್ಲ. ಹಾಗಾಗಿ ಉತ್ತರ ನೀಡಲು ಸಮಯಾವಕಾಶ ನೀಡುವಂತೆ ಕೋರಿದೆ.
ಇದ್ದಕ್ಕಿದ್ದಂತೆ ಸಾವಿರಾರು ವಿಮಾನಗಳ ಹಾರಟ ರದ್ದುಗೊಳಿಸಿ, ವಿಮಾನಯಾನದಲ್ಲಿ ವ್ಯತ್ಯಯವುಂಟಾಗಿ ಪ್ರಯಾಣಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಈ ಹಿನ್ನೆಲೆಯಲ್ಲಿ ಇಂಡಿಗೋ ಉಖ್ಯಸ್ಥರಿಗೆ ಡಿಜಿಸಿಎ ಶೋಕಾಸ್ ನೋಟಿಸ್ ನೀಡಿದೆ.
ಇಂಡಿಗೋ ಗ್ರಾಹಕರಿಗೆ ಉಂಟಾದ ಅನಾನುಕೂಲತೆ ಹಾಗೂ ತೊಂದರೆಗೆ ಕ್ಷಮೆಯಾಚಿಸಿದೆ. ಆದರೆ ರೂಟ್ ಕಾಸ್ ಅನಾಲಿಸ್ ಬಗ್ಗೆ ಹೆಚ್ಚಿನ ಸಮಯಬೇಕಾಗುತ್ತದೆ ಎಂದು ತಿಳಿಸಿದೆ.
