BREAKING : ‘ಇಂಡಿಗೋ ಏರ್ ಲೈನ್ಸ್’ ಗೆ ಕೇಂದ್ರ ಸರ್ಕಾರದಿಂದ ಮೂಗುದಾರ : ಚಳಿಗಾಲದ ವೇಳಾಪಟ್ಟಿ ಕಡಿತ.!

ನವದೆಹಲಿ : ದೇಶದ ಅತಿದೊಡ್ಡ ವಿಮಾನಯಾನ ಸಂಸ್ಥೆ ಇಂಡಿಗೋದ ಕಾರ್ಯಾಚರಣೆಯಲ್ಲಿ ಅಸ್ತವ್ಯಸ್ತ ಉಂಟಾಗಿದ್ದು, ಪ್ರಯಾಣಿಕರು ಹಿಡಿಶಾಪ ಹಾಕಿದ್ದಾರೆ. ಕಳೆದ 1 ವಾರದಿಂದ ಪ್ರಯಾಣಿಕರು ವಿಮಾನ ಹಾರಾಟದಲ್ಲಿ ವ್ಯತಯ ಅನುಭವಿಸಿದ್ದಾರೆ.

ಈ ಹಿನ್ನೆಲೆ ಕೇಂದ್ರ ಸರ್ಕಾರ ಇಂಡಿಗೋ ಸಂಸ್ಥೆಗೆ ಮೂಗುದಾರ ಹಾಕಿದ್ದು, ಕೇಂದ್ರವು ಇಂಡಿಗೋದ ಚಳಿಗಾಲದ ವಿಮಾನ ವೇಳಾಪಟ್ಟಿಯನ್ನು ಕಡಿತಗೊಳಿಸಿ, ಆ ಸ್ಲಾಟ್ಗಳನ್ನು ಇತರ ವಿಮಾನಯಾನ ಸಂಸ್ಥೆಗಳಿಗೆ ಮರು ಹಂಚಿಕೆ ಮಾಡಲಿದೆ ಎಂದು ನಾಗರಿಕ ವಿಮಾನಯಾನ ಸಚಿವ ಕೆ. ರಾಮ್ ಮೋಹನ್ ನಾಯ್ಡು ಹೇಳಿದ್ದಾರೆ.

ಇಂಡಿಗೋ ವಿಮಾನ ಸಂಚಾರ ಅಡೆತಡೆಗಳು ಇನ್ನೂ ಮುಂದುವರೆದಿದ್ದು, ಇಂದು ಸುಮಾರು 500 ಇಂಡಿಗೋ ವಿಮಾನಗಳನ್ನು ರದ್ದುಗೊಳಿಸಲಾಗಿದೆ, ದೆಹಲಿ (152) ಮತ್ತು ಬೆಂಗಳೂರು (121) ಹೆಚ್ಚು ಹಾನಿಗೊಳಗಾಗಿವೆ. ಚೆನ್ನೈ (81), ಹೈದರಾಬಾದ್ (58), ಮುಂಬೈ (31), ಲಕ್ನೋ (26) ಮತ್ತು ಅಹಮದಾಬಾದ್ (16) ನಲ್ಲಿಯೂ ವಿಮಾನ ರದ್ದತಿ ವರದಿಯಾಗಿದೆ.

ಬಿಕ್ಕಟ್ಟಿನ ಹಿನ್ನೆಲೆಯಲ್ಲಿ, ನಾಗರಿಕ ವಿಮಾನಯಾನ ಸಚಿವಾಲಯ (MoCA) ಇಂದು ಎಲ್ಲಾ ವಿಮಾನಯಾನ ನಿರ್ವಾಹಕರ ಉನ್ನತ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಸಲಿದೆ. ಇತ್ತೀಚಿನ ಇಂಡಿಗೋ ಕಾರ್ಯಾಚರಣೆಯ ಅಡಚಣೆಗಳಂತಹ ಬಿಕ್ಕಟ್ಟು ಮರುಕಳಿಸದಂತೆ ನೋಡಿಕೊಳ್ಳುವತ್ತ ಪರಿಶೀಲನಾ ಸಭೆ ಗಮನಹರಿಸಲಿದೆ ಎಂದು ಮೂಲಗಳು ತಿಳಿಸಿವೆ. ಸೋಮವಾರ ಸಂಜೆ ದೂರದರ್ಶನದೊಂದಿಗೆ ಮಾತನಾಡಿದ ವಿಮಾನಯಾನ ಸಚಿವರು, ಕೇಂದ್ರವು ಇಂಡಿಗೋದ ಚಳಿಗಾಲದ ವಿಮಾನ ವೇಳಾಪಟ್ಟಿಯನ್ನು ಕಡಿತಗೊಳಿಸಿ ಆ ಸ್ಲಾಟ್ಗಳನ್ನು ಇತರ ವಿಮಾನಯಾನ ಸಂಸ್ಥೆಗಳಿಗೆ ಮರುಹಂಚಿಕೆ ಮಾಡಲಿದೆ ಎಂದು ಹೇಳಿದರು.

X ನಲ್ಲಿ ಪೋಸ್ಟ್ ಮಾಡಿರುವ ರಾಮ್ ಮೋಹನ್ ನಾಯ್ಡು, ಪರಿಸ್ಥಿತಿಯನ್ನು ನಿರ್ಣಯಿಸಲು ಸೋಮವಾರ ರಾತ್ರಿ ಉನ್ನತ ಮಟ್ಟದ ಪರಿಶೀಲನಾ ಸಭೆ ನಡೆಸಲಾಗಿದೆ ಮತ್ತು ಹಿರಿಯ ಅಧಿಕಾರಿಗಳು ವಿಮಾನ ನಿಲ್ದಾಣಗಳಿಗೆ ಭೇಟಿ ನೀಡಿ ವಿಮಾನಯಾನ ಕಾರ್ಯಾಚರಣೆಗಳು ಮತ್ತು ಪ್ರಯಾಣಿಕರ ಸೇವೆಗಳನ್ನು ಪರಿಶೀಲಿಸಲು ನಿರ್ದೇಶಿಸಲಾಗಿದೆ ಎಂದು ಹೇಳಿದ್ದಾರೆ. “ಪ್ರಯಾಣಿಕರು ಗುರುತಿಸಿರುವ ಅಂತರಗಳು ಸೇರಿದಂತೆ ಯಾವುದೇ ಅಂತರವನ್ನು ಗುರುತಿಸಿದರೆ, ಅವುಗಳನ್ನು ತಕ್ಷಣವೇ ಸರಿಪಡಿಸಬೇಕು ಎಂದಿದ್ದಾರೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read