ಬೆಳಗಾವಿ: ವಿಧಾನ ಪರಿಷತ್ ನಲ್ಲಿ ಮದ್ಯಪ್ರಿಯರ ಸಮಸ್ಯೆಗಳ ಬಗ್ಗೆ ನಿಯಮ 330ರ ಅಡಿ ಬಿಜೆಪಿ ಸದಸ್ಯ ರವಿಕುಮಾರ್ ಪ್ರಸ್ತಾಪಿಸಿದ್ದಾರೆ.
ಮದ್ಯಸೇವಿಸುವ ಶೇ. 3ರಷ್ಟು ಜನ ರೋಗಕ್ಕೆ ತುತ್ತಾಗುತ್ತಿದ್ದಾರೆ. ಲಿವರ್ ಡ್ಯಾಮೇಜ್, ಜಾಂಡಿಸ್ ಕಾಯಿಲೆಯಿಂದ ಬಳಲುತ್ತಿದ್ದಾರೆ. ಜಾಂಡಿಸ್ ಕಾಯಿಲೆಯಿಂದ ಮದ್ಯಪ್ರಿಯರು ಬೇಗನೆ ಸಾಯುತ್ತಿದ್ದಾರೆ. ಮದ್ಯಧ್ಯಪ್ರಿಯರ ಚಿಕಿತ್ಸೆಗೆ ಹಣ ಮೀಸಲಿಟ್ಟರೆ ಅನುಕೂಲವಾಗುತ್ತದೆ ಎಂದು ಹೇಳಿದ್ದಾರೆ.
ಮದ್ಯಪ್ರಿಯರು ಹೆಚ್ಚು ದಿನ ಬದುಕಿದ್ದರೆ ಸರ್ಕಾರಕ್ಕೆ ಆದಾಯ ಬರುತ್ತದೆ. ಮದ್ಯ ಸೇವನೆಯಿಂದ ಶೇಕಡ ಎರಡರಷ್ಟು ಜನ ಸಾಯುತ್ತಿದ್ದಾರೆ. ದೇಶದಲ್ಲಿ ಸುಮಾರು 15 ಲಕ್ಷ ಜನ ಸಾಯುತ್ತಿದ್ದಾರೆ. ಐವರು ಮದ್ಯಪ್ರಿಯರ ಪೈಕಿ ಓರ್ವ ಜಾಂಡಿಸ್ ನಿಂದ ಸಾಯುತ್ತಿದ್ದಾನೆ. ರಾಜ್ಯ ಸರ್ಕಾರ ನಡೆಯುತ್ತಿರುವುದೇ ಮದ್ಯಪ್ರಿಯರ ಹಣದಿಂದ. ಸರ್ಕಾರದ ಆದಾಯದಲ್ಲಿ ಮದ್ಯಪ್ರಿಯರ ಯೋಗದಾನ ಹೆಚ್ಚಾಗಿದೆ. ಮದ್ಯಪ್ರಿಯರ ಚಿಕಿತ್ಸೆಗಾಗಿ ಶೇಕಡ 20ರಷ್ಟು ಹಣ ಮೀಸಲಿಡಬೇಕು ಎಂದು ವಿಧಾನ ಪರಿಷತ್ ನಲ್ಲಿ ಬಿಜೆಪಿ ಸದಸ್ಯ ರವಿಕುಮಾರ್ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯೆ ನೀಡಿದ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪೂರ, ಏಪ್ರಿಲ್ ನಿಂದ ಸೆಪ್ಟೆಂಬರ್ ವರೆಗೆ 195 ಲಕ್ಷ ಪೆಟ್ಟಿಗೆ ಬಿಯರ್ ಮಾರಾಟವಾಗಿದೆ. ಕಳೆದ ವರ್ಷ ಇದೇ ಅವಧಿಗೆ ಹೋಲಿಸಿದಲ್ಲಿ ಮಾರಾಟ ಇಳಿಕೆಯಾಗಿದೆ. 46 -47 ಲಕ್ಷ ಬಾಕ್ಸ್ ಬಿಯರ್ ಮಾರಾಟವಾಗಿತ್ತು. ಶೇಕಡ 19.55 ರಷ್ಟು ಬಿಯರ್ ಮಾರಾಟದ ಬೆಳವಣಿಗೆ ಕುಂಠಿತವಾಗಿದೆ. ಪ್ರಸಕ್ತ ಸಾಲಿನಲ್ಲಿ ಬಿಯರ್ ಮಾರಾಟವು ಕಡಿಮೆಯಾಗುತ್ತಿದೆ. ರಾಜ್ಯದಲ್ಲಿ ಹೆಚ್ಚಿನ ಮಳೆಯಿಂದ ಶೀತದ ವಾತಾವರಣ ಇದೆ. ಶೀತ ವಾತಾವರಣದ ಕಾರಣ ಬಿಯರ್ ಮಾರಾಟದಲ್ಲಿ ಕುಸಿತವಾಗಿದೆ. ಅಬಕಾರಿ ಆದಾಯವನ್ನು ಬಜೆಟ್ ಕಾರ್ಯಕ್ರಮಗಳಿಗೆ ಕೊಡುತ್ತಿದ್ದೇವೆ ಎಂದು ಹೇಳಿದ್ದಾರೆ.
