ನೆಲಮಂಗಲ: ಮೂರು ಗಿರ್ ಹಸುಗಳನ್ನು ಕದ್ದಿರುವ ಕಳ್ಳರು ಒಂದು ಹಸುವಿನ ಕತ್ತು ಕೊಯ್ದು ವಿಕೃತಿ ಮೆರೆದಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲಿ ನಡೆದಿದೆ.
ದಾಸನಪುರ ಹೋಬಳಿಯ ಗೌಡಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಹಸುಗಳನ್ನು ಕದ್ದು ಪರಾರ್ಯಾಗಿದ್ದಲ್ಲದೇ ಒಂದು ಹಸುವಿನ ಕತ್ತು ಕೊಯ್ದಿದ್ದಾರೆ. ಗಾಯಾಳು ಹಸು ಖದೀಮರಿಂದ ತಪ್ಪಿಸಿಕೊಂಡು ಬಂದಿದೆ.
ವ್ಜಯಲಕ್ಷ್ಮೀ ಎಂಬುವವರು ತಮ್ಮ ಮಗ ಹೈನುಗಾರಿಕೆ ಮಾಡುವ ಆಸಕ್ತಿ ಹೊಂದಿದ್ದಾನೆ ಎಂಬ ಕಾರಣಕ್ಕೆ ಗುಜರಾತ್ ನಿಂದ ಗಿರ್ ಹಸುಗಳನ್ನು ತರಿಸಿದ್ದರು. ಎರಡು ವರ್ಷಗಳಿಂದ ಗಿರ್ ಹಸುಗಳನ್ನು ಸಾಕಿದ್ದರು. ಆದರೆ ಕಳ್ಳರು ಈ ಹಸುಗಳನ್ನು ಕದ್ದಿದ್ದು, ಒಂದು ಹಸುವಿನ ಕತ್ತು ಕೊಯ್ದಿದ್ದಾರೆ. ಮಾದನಾಯಕನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
