ವಿಜಯಪುರ : ರಾಜ್ಯದಲ್ಲಿ ಅಮಾನವೀಯ ಘಟನೆಯೊಂದು ನಡೆದಿದ್ದು, 3 ಹೆಣ್ಣು ಹೆತ್ತಳೆಂದು ಪತಿ ಪತ್ನಿಯ ತಲೆ ಕೂದಲು ಕತ್ತರಿಸಿದ ಘಟನೆ ವಿಜಯಪುರ ತಾಲೂಕಿನ ಹೊನ್ನುಟಗಿಯಲ್ಲಿ ನಡೆದಿದೆ.
ಪತಿ ದುಂಡೇಶ್ ಎಂಬಾತ ಪತ್ನಿ ಜ್ಯೋತಿ ಮೇಲೆ ಈ ಕೃತ್ಯ ಎಸಗಿದ್ದಾನೆ. ಮಾಟಗಾರ್ತಿ ಹೇಳಿದ್ದನ್ನು ನಂಬಿದ ಪತಿ ದುಂಡೇಶ್ ಪತ್ನಿಯ ತಲೆ ಕೂದಲು ಕತ್ತರಿಸಿ ನಂತರ ಸ್ಮಶಾನದಲ್ಲಿ ಸುಟ್ಟು ಹಾಕಿದ್ದಾನೆ ಎನ್ನಲಾಗಿದೆ.
ನಿನ್ನ ಪತ್ನಿಯ ಮೈಯಲ್ಲಿ ದೆವ್ವವಿದೆ, ಅದಕ್ಕಾಗಿ ಗಂಡು ಮಗು ಆಗುತ್ತಿಲ್ಲ. ದೆವ್ವವನ್ನ ಓಡಿಸಬೇಕಾದರೆ ನೆತ್ತಿಯ ಭಾಗದಲ್ಲಿ ರಕ್ತ ಬರುವಂತೆ ತಲೆ ಕೂದಲು ತೆಗೆಯಬೇಕು ಎಂದು ಮಾಟಗಾರ್ತಿ ಹೇಳಿದ್ದಾಳೆ ಎನ್ನಲಾಗಿದೆ.
ಪತಿಯ ಗಂಡ, ಅತ್ತೆ ಮಾವ ಸೇರಿಕೊಂಡು ಮಾಟಗಾರ್ತಿಯ ಹೇಳಿದ್ದಂತೆ ಈ ಕೃತ್ಯ ಎಸಗಿದ್ದಾರೆ. ಘಟನೆಯಿಂದ ಬೇಸತ್ತ ಮಹಿಳೆ ಕಣ್ಣೀರಿಟ್ಟಿದ್ದಾರೆ. ಪತಿ ಹಾಗೂ ಕುಟುಂಬದ ವರ್ತನೆಗೆ ಗ್ರಾಮಸ್ಥರು ವ್ಯಾಪಕ ಆಕ್ರೋಶ ಹೊರ ಹಾಕಿದ್ದಾರೆ.ಗಂಡು ಮಗು ಆಗಲಿಲ್ಲ ಎಂದು ಪತಿ ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ.
