BIG NEWS: ಇಂಡಿಗೋ ವಿಮಾನ ಹಾರಾಟ ರದ್ದು ಬೆನ್ನಲ್ಲೇ ಇತರ ಫ್ಲೈಟ್ ಟಿಕೆಟ್ ದರದಲ್ಲಿ ಭಾರಿ ಹೆಚ್ಚಳ

ಬೆಂಗಳೂರು: ದೇಶಾದ್ಯಂತ ಇಂಡಿಗೋ ವಿಮಾನ ಹಾರಾಟದಲ್ಲಿ ಕಳೆದ ಐದು ದಿನಗಳಿಂದ ವ್ಯತ್ಯಯವುಂಟಾಗಿದ್ದು, ಸಾವಿರಾರು ಇಂಡಿಗೋ ವಿಮಾನಗಳ ಹಾರಾಟ ರದ್ದಾಗಿವೆ. ಬೆಂಗಳೂರು, ಚೆನ್ನೈ, ದೆಹಲಿ, ಮುಂಬೈ, ಕೊಚ್ಚಿ ಸೇರಿದಂತೆ ಹಲವು ಏರ್ ಪೋರ್ಟ್ ಗಳಲ್ಲಿ ಪ್ರಯಾಣಿಕರು ಪರದಾಡುತ್ತಿದ್ದಾರೆ. ಈ ನಡುವೆ ಇತರೆ ಫ್ಲೈಟ್ ಟಿಕೆಟ್ ಗಳ ದರ ಗಗನಕ್ಕೇರಿವೆ.

ಇಂಡಿಗೋ ವಿಮಾನ ಹಾರಾಟದಲ್ಲಿ ಭಾರಿ ವ್ಯತ್ಯಯವಾಗಿರುವ ಪರಿಸ್ಥಿತಿ ಲಾಭ ಪಡೆದುಕೊಳ್ಳುತ್ತಿರುವ ಇತರೆ ಏರ್ ಲೈನ್ಸ್ ಗಳು ಭಾರಿ ಪ್ರಮಾಣದಲ್ಲಿ ಟಿಕೆಟ್ ದರ ಹೆಚ್ಚಳ ಮಾಡಿವೆ. ಏರ್ ಫೇರ್ ನಿಯಮಗಳನ್ನು ಉಲ್ಲಂಘಿಸಿ ಟಿಕೆಟ್ ಮೇಲೆ ಹತ್ತಕ್ಕಿಂತ ಹೆಚ್ಚುಪಟ್ಟು ಬೆಲೆ ಏರಿಕೆ ಮಾಡಿದ್ದು, ಪ್ರಯಾಣಿಕರು ಹೈರಾಣಾಗಿದ್ದಾರೆ.

ಮಹಾನಗರಿಗಳಿಗೆ ವಿಮಾನ ಟಿಕೆಟ್ ದರದಲ್ಲಿ 5-8 ಸಾವಿರದವರೆಗೂ ಏರಿಕೆಯಾಗಿದೆ. ಎಕಾನಾಮಿ ಕ್ಲಾಸ್ ಟಿಕೆಟ್ ದರಗಳು 50-80 ಸಾವಿರ ರೂಪಾಯಿವರೆಗೂ ಏರಿಕೆಯಾಗಿವೆ. ಬೆಂಗಳೂರಿನಿಂದ ಮುಂಬೈಗೆ 25-75 ಸಾವಿರ ರೂಪಾಯಿ ಟಿಕೆಟ್ ದರ ಏರಿಕೆಯಾಗಿದೆ. ಬೆಂಗಳೂರಿನಿಂದ ಕೊಚ್ಚಿಗೆ 18 ಸಾವಿರ ರೂಪಾಯಿ ಟಿಕೆಟ್ ದರ ಹೆಚ್ಚಳವಾಗಿದೆ. ಇತರ ವಿಮಾನಯಾನ ಸಂಸ್ಥೆಗಳು ಪ್ರಯಾಣಿಕರಿಂದ ವಸೂಲಿಗಿಳಿದಿದ್ದು, ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಇಂಡಿಗೋ ಹಾರಾಟದಲ್ಲಿ ವ್ಯತ್ಯಯ, ಇತರ ವಿಮಾನಗಳ ಟಿಕೆಟ್ ದರ ಭಾರಿ ಏರಿಕೆ ಬಗ್ಗೆ ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡುವಂತೆ ವಿಪಕ್ಷಗಳು ಸಂಸತ್ ಅಧಿವೇಶನದಲ್ಲಿ ಧ್ವನಿ ಎತ್ತಿವೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read