BIG NEWS : ರಾಜ್ಯ ಸರ್ಕಾರದಿಂದ ಮಹಿಳೆಯರು ಮತ್ತು ಮಕ್ಕಳಿಗೆ ಸಿಗುವ ಸೌಲಭ್ಯಗಳೇನು..? ಇಲ್ಲಿದೆ ಮಾಹಿತಿ

ಬೆಂಗಳೂರು : ರಾಜ್ಯ ಸರ್ಕಾರ ಮಹಿಳೆಯರು ಮತ್ತು ಮಕ್ಕಳಿಗಾಗಿ ಪೌಷ್ಠಿಕಾಂಶ, ಶಿಕ್ಷಣ, ಆರೋಗ್ಯ, ಆರ್ಥಿಕ ನೆರವು ಮತ್ತು ರಕ್ಷಣಾತ್ಮಕ ಯೋಜನೆಗಳನ್ನು ಜಾರಿಗೊಳಿಸಿದೆ, ಇದರಲ್ಲಿ ಅಂಗನವಾಡಿ ಸೇವೆಗಳು (ಪೂರಕ ಪೌಷ್ಠಿಕಾಂಶ, ಚುಚ್ಚುಮದ್ದು), ಸ್ತ್ರೀಶಕ್ತಿ ಯೋಜನೆ (ಸ್ವಾವಲಂಬನೆಗೆ ನೆರವು), ಸಾಂತ್ವನ ಯೋಜನೆ (ದೌರ್ಜನ್ಯಕ್ಕೊಳಗಾದವರಿಗೆ ಆಶ್ರಯ) ಸೇರಿ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಈ ಕುರಿತು ಇಲ್ಲಿದೆ ಮಾಹಿತಿ.

ಮಹಿಳೆಯರಿಗೆ ಮತ್ತು ಮಕ್ಕಳಿಗೆ ಸರಕಾರದಿಂದ ಸಿಗುವ ಸೌಲಭ್ಯಗಳ ವಿವರ:

1) ಸಮಗ್ರ ಶಿಶು ಅಭಿವೃದ್ಧಿ ಯೋಜನೆ
6 ತಿಂಗಳಿನಿಂದ 6 ವರ್ಷದವರೆಗಿನ ಮಕ್ಕಳಿಗೆ, ಬಾಣಂತಿಯರಿಗೆ, ಪ್ರಾಯ ಬಾಲಕಿಯರಿಗೆ ಪೂರಕ ಪೌಷ್ಠಿಕ ಪೂರ್ವ ಆಹಾರ, ಆರೋಗ್ಯ ಸೇವೆಗಳು, (ಹಾಲು, ಕಾಳು, ಧಾನ್ಯಗಳು)
ಸಂಬಂಧಪಟ್ಟ ಕೇಂದ್ರಗಳನ್ನು ಅಂಗನವಾಡಿ ಸಂಪರ್ಕಿಸಿ ಸೌಲಭ್ಯವನ್ನು ಪಡೆದುಕೊಳ್ಳಬಹುದು.

2) ಭಾಗ್ಯಲಕ್ಷ್ಮೀ ಯೋಜನೆ
ಬಿಪಿಎಲ್ ಕುಟುಂಬದಲ್ಲಿ ಜನಿಸುವ ಮೊದಲ ಇಬ್ಬರು ಹೆಣ್ಣು ಮಕ್ಕಳಿಗೆ ಆರೋಗ್ಯ ವಿಮೆ ಮತ್ತು 18 ವರ್ಷ ತುಂಬಿದ ನಂತರ ರೂ. 1 ಲಕ್ಷ ಮೊತ್ತ ಪಾವತಿ ಸೌಲಭ್ಯ
ಸಂಬಂಧಪಟ್ಟ ಅಂಗನವಾಡಿ ಕೇಂದ್ರಗಳಲ್ಲಿ ಸಂಘಗಳನ್ನು ಸ್ವ-ಸಹಾಯ ಮಾಡಿಕೊಂಡು ಸವಲತ್ತುಗಳನ್ನು ಪಡೆದುಕೊಳ್ಳಬಹುದು.

3) ಸ್ತ್ರೀ ಶಕ್ತಿ ಯೋಜನೆ
ಸಹಾಯ ಧನ ಮತ್ತು ಪ್ರೋತ್ಸಾಹ ಧನ ವಿತರಣೆ. ಸ್ವ-ಸಹಾಯ ಸಂಘಗಳಿಗೆ ಸರಕಾರದಿಂದ ಸುತ್ತು ನಿಧಿ, ತರಬೇತಿ, ಬಡ್ಡಿ ನೀಡಲಾಗುತ್ತದೆ.

4) ಉದ್ಯೋಗಿನಿ ಯೋಜನೆ
ಮಹಿಳೆಯರು ಸ್ವಂತ ಉದ್ಯೋಗ ಕೈಗೊಳ್ಳಲು ಗರಿಷ್ಠ ರೂ 3 ಲಕ್ಷದವರೆಗೆ ಬ್ಯಾಂಕಿನಿಂದ ಸಾಲವನ್ನು ಪಡೆಯಬಹುದಾಗಿದೆ. ಪಡೆಯುವ ಸಾಲಕ್ಕೆ ಸಾಮಾನ್ಯ ವರ್ಗಕ್ಕೆ 30% ಮತ್ತು ಪ.ಜಾ/ಪ.ಪಂ ವರ್ಗಕ್ಕೆ 50% ರಷ್ಟು ಸಾಲದ ಮೇಲೆ ಸಬ್ಸಿಡಿ ನೀಡಲಾಗುತ್ತದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read