BIG NEWS : ರಾಜ್ಯದ ಗ್ರಾಮ ಪಂಚಾಯ್ತಿ ಅಧ್ಯಕ್ಷರು, ಸದಸ್ಯರ ಗೌರವಧನ ಎಷ್ಟಿದೆ..? ಇಲ್ಲಿದೆ ಮಾಹಿತಿ


ಬೆಂಗಳೂರು : ರಾಜ್ಯದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರ ಗೌರವಧನವನ್ನು ಡಿಸೆಂಬರ್ 2022ರಲ್ಲಿ ರಾಜ್ಯ ಸರ್ಕಾರ ದ್ವಿಗುಣಗೊಳಿಸಿ ಆದೇಶಿಸಿದೆ. ಪಂಚಾಯ್ತಿ ಅಧ್ಯಕ್ಷರು, ಸದಸ್ಯರ ಗೌರವಧನ ಎಷ್ಟಿದೆ..? ಇಲ್ಲಿದೆ ಮಾಹಿತಿ

ಗ್ರಾಮ ಪಂಚಾಯತಿ ಅಧ್ಯಕ್ಷರಿಗೆ ರೂ. 6000/- ಗಳು, ಉಪಾಧ್ಯಕ್ಷರಿಗೆ ರೂ. 4000/- ಗಳು ಮತ್ತು ಸದಸ್ಯರಿಗೆ ರೂ.2000/- ಗೌರವಧನ ಮತ್ತು ಉಪವೇಶನ ಶುಲ್ಕ ರೂ. 300/- ಗಳನ್ನು ನೀಡಲಾಗುತ್ತಿದೆ. ತಾಲ್ಲೂಕು ಪಂಚಾಯತಿ ಅಧ್ಯಕ್ಷರಿಗೆ ರೂ. 6000/- ಗಳು, ಉಪಾಧ್ಯಕ್ಷರಿಗೆ ರೂ. 4000/- ಗಳು ಮತ್ತು ಸದಸ್ಯರಿಗೆ ರೂ.3000/- ಗೌರವಧನ ಮತ್ತು ಉಪವೇಶನ ಶುಲ್ಕ ರೂ. 150/- ಗಳನ್ನು ನೀಡಲಾಗುತ್ತಿದೆ. ಜಿಲ್ಲಾ ಪಂಚಾಯತಿ ಅಧ್ಯಕ್ಷರಿಗೆ ರೂ. 35000/ ಗಳು, ಉಪಾಧ್ಯಕ್ಷರಿಗೆ ರೂ. 15000/- ಗಳು ಮತ್ತು ಸದಸ್ಯರಿಗೆ ರೂ.5000/- ಗೌರವಧನ ಮತ್ತು ಉಪವೇಶನ ಶುಲ್ಕ ರೂ. 200/- ಗಳನ್ನು ನೀಡಲಾಗುತ್ತಿದೆ. ಜಿಲ್ಲಾ ಪಂಚಾಯತಿ ಅಧ್ಯಕ್ಷರಿಗೆ ರಾಜ್ಯ ಸಚಿವರ ಸ್ಥಾನಮಾನವನ್ನು ನೀಡಲಾಗಿದೆ. ಅಧ್ಯಕ್ಷರಿಗೆ ವೇತನ ಮತ್ತು ಭತ್ಯೆಗಳನ್ನು ನಿಯಮಾನುಸಾರ ಭರಿಸಲು ಅವಕಾಶ ಕಲ್ಪಿಸಲಾಗಿದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read