BREAKING: ಇಂದು ಒಂದೇ ದಿನ 102 ಇಂಡಿಗೋ ವಿಮಾನ ರದ್ದು; 30ಕ್ಕೂ ಹೆಚ್ಚು ವಿಮಾನಗಳ ಹಾರಾಟದಲ್ಲಿ ವ್ಯತ್ಯಯ

ಬೆಂಗಳೂರು: ಕಳೆದ ನಾಲ್ಕು ದಿನಗಳಿಂದ ದೇಶಾದ್ಯಂತ ಇಂಡಿಗೋ ವಿಮಾನ ಹಾರಟದಲ್ಲಿ ಭಾರಿ ವ್ಯತ್ಯಯವಾಗಿದ್ದು, ಹಲವು ವಿಮಾನಗಳು ರದ್ದಾಗಿವೆ. ಇಂಡಿಗೋ ವಿಮಾನ ಹಾರಾಟ ದಿಢೀರ್ ರದ್ದಾದ ಹಿನ್ನೆಲೆಯಲ್ಲಿ ಬೆಂಗಳೂರು, ಹೈದರಾಬಾದ್, ದೆಹಲಿ ಸೇರಿದಂತೆ ವಿವಿಧ ಏರ್ ಪೋರ್ಟ್ ಗಳಲ್ಲಿ ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಏರ್ ಪೋರ್ಟ್ ಗೆ ಆಗಮಿಸಿದ ಪ್ರಯಾಣಿಕರಿಗೆ ಪರ್ಯಾಯ ವ್ಯವಸ್ಥೆ, ಊಟ- ವಸತಿ ಇಲ್ಲದೇ ಏರ್ ಪೋರ್ಟ್ ಒಳಗೆ ಪ್ರಯಾಣಿಕರು ಮಲಗಿರುವ, ಆಹಾರಕ್ಕಾಗಿ ಪರದಾಡುತ್ತಿರುವ, ಪ್ರತಿಭಟನೆ ನಡೆಸುತ್ತಿರುವ ದೃಶ್ಯ ಕಂಡುಬಂದಿದೆ. ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಒಳಭಾಗದಲ್ಲಿ ಪ್ರಯಾಣಿಕರ ಸ್ಥಿತಿ ಬಸ್ ನಿಲ್ದಾಣಗಳಲ್ಲಿ ಬಸ್ ಗಳಿಗಾಗಿ ಪ್ರಯಾಣಿಕರು ಪರದಾಡುತ್ತಿದ್ದಂತೆ, ರೈಲು ನಿಲ್ದಾಣಗಳಂತೆ ಕಂಡು ಬರುತ್ತಿದೆ.

ಬೆಂಗಳೂರು ಏರ್ ಪೋರ್ಟ್ ನಲ್ಲಿ ಇಂದು ಒಂದೇ ದಿನ 102 ಇಂಡಿಗೋ ವಿಮಾನಗಳು ರದ್ದಾಗಿವೆ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹಾರಾಟ ನಡೆಸಬೇಕಿದ್ದ 50 ಇಂಡಿಗೋ ವಿಮಾನಗಳು ಹಾಗೂ ಬೆಂಗಳೂರು ಏರ್ ಪೋರ್ಟ್ ಗೆ ಆಗಮಿಸಬೇಕಿದ್ದ 52 ವಿಮಾನಗಳು ಕೊನೇಕ್ಷಣದಲ್ಲಿ ರದ್ದಾಗಿವೆ. ೩೦ಕ್ಕೂ ಹೆಚ್ಚು ವಿಮಾನಗಳ ಹಾರಾಟದಲ್ಲಿ ವಿಳಂಬವಾಗಿವೆ ಎಂದು ಇಂಡಿಗೋ ಸಂಸ್ಥೆ ಮಾಹಿತಿ ನೀಡಿದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read