ಹಾಸನ: ನಾಪತ್ತೆಯಾಗಿದ್ದ ಗರ್ಭಿಣಿ ಮೃತದೇಹ ಕೆರೆಯಲ್ಲಿ ನಿನ್ನೆ ಸಂಜೆ ಪತ್ತೆಯಾಗಿದೆ. ಹೊನ್ನವಳ್ಳಿ ಗ್ರಾಮದ ಕೆರೆಯಲ್ಲಿ ಗರ್ಭಿಣಿ ವಂದನಾ(24) ಶವ ಪತ್ತೆಯಾಗಿದೆ.
ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಹೊನ್ನವಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ಪತಿ ಮತ್ತು ಆತನ ಪೋಷಕರ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪ ಕೇಳಿ ಬಂದಿದೆ.
ಮಗಳ ಸಾವಿಗೆ ಕಾರಣ ಎಂದು ಗಂಡ, ಆತನ ಪೋಷಕರು ಕಾರಣವೆಂದು ವಂದನಾ ಪೋಷಕರು ಆರೋಪಿಸಿದ್ದಾರೆ. ಒಂದೂವರೆ ವರ್ಷದ ಹಿಂದೆ ಪ್ರೀತಿಸಿ ರೂಪಿತ್ ಮತ್ತು ವಂದನಾ ಮದುವೆಯಾಗಿದ್ದರು. ಮೆಡಿಕಲ್ ಶಾಪ್ ವೊಂದರಲ್ಲಿ ವಂದನಾ ಕೆಲಸ ಮಾಡುತ್ತಿದ್ದರು.
ಡಿಸೆಂಬರ್ 2ರಂದು ಅತ್ತೆ ಮಂಜುಳಾ ಮತ್ತು ಸೊಸೆ ವಂದನಾ ನಡುವೆ ಜಗಳವಾಗಿತ್ತು. ಮೂರು ದಿನಗಳ ಹಿಂದೆ ವಂದನಾ ನಾಪತ್ತೆಯಾಗಿದ್ದರು. ನಿನ್ನೆ ಸಂಜೆ ಹೊನ್ನವಳ್ಳಿ ಗ್ರಾಮದ ಕೆರೆಯಲ್ಲಿ ವಂದನಾ ಶವ ಪತ್ತೆಯಾಗಿದೆ. ಹಾಸನ ಜಿಲ್ಲಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಅರಕಲಗೂಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
