ಚಿಕ್ಕಮಗಳೂರು: ಚಿಕ್ಕಮಗಳೂರು ತಾಲೂಕಿನ ಅರೆನೂರು ಗ್ರಾಮದಲ್ಲಿ ಗೃಹಿಣಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಲ್ದೂರು ಠಾಣೆಯ ಪೊಲೀಸರು ಆರೋಪಿ ಜನಾರ್ದನ(38) ನನ್ನು ಬಂಧಿಸಿದ್ದಾರೆ.
ಡಿಸೆಂಬರ್ 2ರಂದು ಬೆಳಗ್ಗೆ ಮನೆಯ ಹಿಂಭಾಗ ಸಂಧ್ಯಾ(32) ಅವರನ್ನು ಕೊಲೆ ಮಾಡಲಾಗಿತ್ತು. ಬಟ್ಟೆ ತೊಳೆಯುವಾಗ ಕತ್ತು ಕೊಯ್ದು ಜನಾರ್ದನ ಪರಾರಿಯಾಗಿದ್ದ. ಪತ್ನಿ ಇದ್ದರೂ ಗಂಡನ ಬಿಟ್ಟ ಅತ್ತೆ ಮಗಳು ಸಂಧ್ಯಾ ಮೇಲೆ ಪ್ರೀತಿ ಉಂಟಾಗಿತ್ತು. ತನ್ನೊಂದಿಗೆ ಬಂದವಳು ವಾಪಸ್ ಮನೆಗೆ ತೆರಳಿದ್ದಕ್ಕೆ ಕೊಲೆ ಮಾಡಿದ್ದ. ಮೂಡಿಗೆರೆ ತಾಲೂಕಿನ ಗ್ರಾಮದ ನಿವಾಸಿ ಜನಾರ್ದನನನ್ನು ಬಂಧಿಸಲಾಗಿದೆ.
