ಬೆಂಗಳೂರು: ರಕ್ತಚಂದನ ಅಕ್ರಮ ಸಾಗಾಟ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದೆ.
ಆಂಧ್ರಪ್ರದೇಶದ ವರಪ್ರಸಾದ್ ರೆಡ್ಡಿ, ರಾಜಶೇಖರ್ ಬಂಧಿತ ಆರೋಪಿಗಳು. ಇನ್ನಿಬ್ಬರು ಆರೋಪಿಗಳ ಗುರುತು ಪತ್ತೆಯಾಗಬೇಕಿದೆ. ಬಂಧ್ತರಿಂದ 1.35 ಕೋಟಿ ರೂ ಮೌಲ್ಯದ 1889 ಕೆಜಿ ರಕ್ತಚಂದನ ವಶಪಡಿಸಿಕೊಳ್ಳಲಾಗಿದೆ.
ಬಂಧಿತ ಆರೋಪಿಗಳಲ್ಲಿ ಓರ್ವ ಬಿಇ ಪದವೀಧರನಾಗಿದ್ದರೆ ಇನ್ನೋರ್ವ ಎಬಿಎ ಪದವೀಧರ. ಹುಳಿಮಾವಿನಲ್ಲಿ ಆರೋಪಿಗಳು ಕಾರಿನ ಹಿಂಬದಿ ಸೀಟು ತೆಗೆದು ಅದರ ಕೆಳಗೆ ರಕ್ತಚಂದನದ ತುಂಡುಗಳನ್ನು ಜೋಡಿಸಿಟ್ಟಿದ್ದರು. ಇದನ್ನು ಮಾರಾಟ ಮಾಡಲೆಂದು ತಮಿಳುನಾಡಿಗೆ ಹೋಗುತ್ತಿದ್ದಾಗ ಹುಳಿಮಾವು ಪೊಲೀಸರು ಕಾರು ಅಡ್ಡಗಟ್ಟಿ ಪರಿಶೀಲಿಸುದಾಗ ರಕ್ತಚಂದನ ಪತ್ತೆಯಾಗಿದೆ.
