ಬೆಂಗಳೂರು : ಪೊಲೀಸ್ ಕಾನ್ಸ್ಟೇಬಲ್ ನಿಂದಲೇ ಲಕ್ಷಾಂತರ ರೂ ಕಳ್ಳತನ ನಡೆದಿರುವ ಆರೋಪ ಬೆಂಗಳೂರಿನಲ್ಲಿ ನಡೆದಿದೆ.
ಪೊಲೀಸ್ ಕಮಿಷನರ್ ಕಚೇರಿಯಲ್ಲೇ ಕಾನ್ಸ್ಟೇಬಲ್ ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ.ಸೈಬರ್ ಪ್ರಕರಣವೊಂದರ ಆರೋಪಿಯನ್ನ ವಿಚಾರಣೆ ಕರೆತರುವಾಗ ಆತನ ಕಾರಿನಲ್ಲಿ 11 ಲಕ್ಷದ ಹಣದ ಬ್ಯಾಗ್ ನ್ನು ಹೆಡ್ ಕಾನ್ ಸ್ಟೇಬಲ್ ಜಬೀವುಲ್ಲಾ ಕದ್ದಿರುವ ಆರೋಪ ಕೇಳಿಬಂದಿದೆ.
ಜೈಲು ಸೇರಿ ಜಾಮೀನು ಪಡೆದು ಬಂದ ಆರೋಪಿ ತನ್ನ ಕಾರಿನಲ್ಲಿದ್ದ ಹಣದ ಬ್ಯಾಗ್ ನಾಪತ್ತೆ ಆಗಿರುವುದನ್ನ ನೋಡಿ ಸೈಬರ್ ಪೊಲೀಸರ ಬಳಿ ವಿಚಾರಿಸಿದ್ದಾನೆ. ಅವರು ಕೊನೆಗೆ ಪರಿಶೀಲಿಸಿದಾಗ ಕಾನ್ಸ್ಟೇಬಲ್ ಜಬೀವುಲ್ಲಾ ಹಣ ತೆಗೆದುಕೊಂಡಿರುವುದು ಗೊತ್ತಾಗಿದೆ.
ಸಿಸಿಟಿವಿಯಲ್ಲಿ ಜಬೀವುಲ್ಲಾ ಕೃತ್ಯ ಸೆರೆಯಾಗಿದ್ದು, ಬ್ಯಾಗ್ ನಲ್ಲಿ 11 ಲಕ್ಷ ಕಳ್ಳತನ ಮಾಡಿ ಏನೂ ಗೊತ್ತಿಲ್ಲದನಂತೆ ಜಬೀವುಲ್ಲಾ ಇದ್ದನು. ನಂತರ ಪೊಲೀಸರು ಜಬೀವುಲ್ಲಾ ಮನೆ ಪರಿಶೀಲಿಸಿದಾಗ ಕೋಣೆಯ ಮಂಚದ ಕೆಳಗೆ ಹಣ ಅಡಗಿಸಿಟ್ಟಿರುವುದು ಬಯಲಾಗಿದೆ. ಒಟ್ಟಿನಲ್ಲಿ ಬೇಲಿಯೇ ಎದ್ದು ಹೊಲ ಮೇಯ್ದಿರೆ ಏನು ಕಥೆ ಎಂದು ಜನಸಾಮಾನ್ಯರು ಪ್ರಶ್ನೆ ಮಾಡುತ್ತಿದ್ದಾರೆ.
