ಬೆಂಗಳೂರು : ರಾಜ್ಯದ ಎಲ್ಲಾ ಶಾಲಾ ವಿದ್ಯಾರ್ಥಿಗಳ ‘ಆಧಾರ್ ಕಾರ್ಡ್ ಬಯೋಮೆಟ್ರಿಕ್ ಅಪ್ ಡೇಟ್’ ಕಡ್ಡಾಯಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.
Aadhar Mandatory Biometric Update (Aadhar MBU) ಬಾಕಿಯಿರುವುದರಿಂದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ಹಲವಾರು ಪರೀಕ್ಷೆಗಳಿಗೆ ಅರ್ಜಿ ಸಲ್ಲಿಸುವುದು ಹಾಗೂ ಇನ್ನು ಹಲವಾರು ಕೇಂದ್ರ/ ರಾಜ್ಯ ಕಾರ್ಯಕ್ರಮಗಳ ಪ್ರಯೋಜನಗಳು ದೊರಕುವುದು ವಿಳಂಬವಾಗಿರುತ್ತದೆ. ಈ ಹಿನ್ನಲೆಯಲ್ಲಿ 5 ವರ್ಷ ಮತ್ತು 15 ವರ್ಷ ವಯಸ್ಸನ್ನು ತಲುಪಿದ ಎಲ್ಲಾ ವಿದ್ಯಾರ್ಥಿಗಳ ಆಧಾರ್ ಕಡ್ಡಾಯ ಬಯೋಮೆಟ್ರಿಕ್ ನವೀಕರಣವನ್ನು (ಎಂಬಿಯು) ಪೂರ್ಣಗೊಳಿಸುವುದು ಅವಶ್ಯಕವಾಗಿರುತ್ತದೆ. ರಾಜ್ಯದ ವಿದ್ಯಾರ್ಥಿಗಳ Aadhar Mandatory Biometric Update(MBU) ನವೀಕರಣ ಕಾರ್ಯದಲ್ಲಿನ ವಿವಿಧ ಅಧಿಕಾರಿಗಳು/ಸಂಸ್ಥೆಗಳ ಜವಾಬ್ದಾರಿಗಳು ಈ ಮುಂದಿನಂತಿವೆ:-
A.Centre for e-Governance (CeG)
- CeG ಯು ಆಧಾರ್ MBU ಕಾರ್ಯದ ರಜಿಸ್ಟ್ರಾರ್ ಆಗಿ ಕಾರ್ಯನಿರ್ವಹಿಸುವುದು.
- ದಿನಾಂಕ:16.09.2025 ರ ಸಭೆಯಲ್ಲಿ ತೀರ್ಮಾನಿಸಿದಂತೆ, ಪ್ರತ್ಯೇಕ ವ್ಯವಸ್ಥೆಯನ್ನು ರೂಪಿಸುವ ವರೆಗೂ ಇತರೆ ರಜಿಸ್ಟ್ರಾರ್ ಗಳೊಂದಿಗೆ ಸಮನ್ವಯ ನಡೆಸಿ MBU ಕಾರ್ಯವನ್ನು ನಡೆಸಲು ಸಹಕರಿಸುವುದು.
B.Unique Identification Authority of India(UIDAI) - UIDAIಸಂಸ್ಥೆಯು UDISE ಆಧಾರದಲ್ಲಿ ಆಧಾರ್ MBU ಆಗಬೇಕಿರುವ ವಿದ್ಯಾರ್ಥಿಗಳ ಮಾಹಿತಿಯನ್ನು ತಾಲ್ಲೂಕುವಾರು ಹಾಗೂ ಶಾಲಾ-ಕಾಲೇಜುವಾರು ಮಾಹಿತಿ ಸಂಗ್ರಹಿಸಿ ಒದಗಿಸುವುದು.
- ರಾಜ್ಯದಾದ್ಯಂತ ಶಾಲಾ, ಕಾಲೇಜು ವಿದ್ಯಾರ್ಥಿಗಳ Aadhar Mandatory Biometric Update (Aadhar MBU) ಪ್ರಕ್ರಿಯೆಯನ್ನು ದಿನಾಂಕ: 01.03.2026ರ ಒಳಗೆ ಪೂರ್ಣಗೊಳಿಸತಕ್ಕದ್ದು.
- UIDAI ಸಂಸ್ಥೆಯಿಂದ ಲಭ್ಯವಾದ ಆಧಾರ್ MBU ಆಗಬೇಕಿರುವ ವಿದ್ಯಾರ್ಥಿಗಳ ಮಾಹಿತಿಯನ್ನು ಜಿಲ್ಲಾ ಹಂತದ ಸಮಿತಿಗೆ ಮತ್ತು ಜಿಲ್ಲಾ ಹಂತದ ಉಪನಿರ್ದೇಶಕರಿಗೆ ಒದಗಿಸುವುದು.
- ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ, ಬೆಂಗಳೂರು ಇವರು ಶಾಲೆಗಳಲ್ಲಿ ವಿದ್ಯಾರ್ಥಿಗಳ Aadhar Mandatory Biometric Update (Aadhar MBU) ໖ ಸಮಗ್ರವಾದ ವೇಳಾಪಟ್ಟಿಯನ್ನು ತಯಾರಿಸಲು ಜಿಲ್ಲಾ ಹಂತದ ಸಮಿತಿಗೆ ಮಾರ್ಗದರ್ಶನ ಒದಗಿಸುವುದು.
- ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ, ಬೆಂಗಳೂರು ಇವರು Aadhar MBU ನೀಡಿರುವ ವೇಳಾಪಟ್ಟಿಯಂತೆ ಹಾಗೂ ನಿಗಧಿತ ಸಮಯದಲ್ಲಿ ಸದರಿ ಕಾರ್ಯವನ್ನು ಪೂರ್ಣಗೊಳಿಸಲು ಜಿಲ್ಲಾ ಶಿಕ್ಷಣ ಉಪನಿರ್ದೇಶಕರು ಹಾಗೂ ಕ್ಷೇತ್ರಶಿಕ್ಷಣಾಧಿಕಾರಿಗಳಿಗೆ ಅಗತ್ಯ ನಿರ್ದೇಶನಗಳನ್ನು ಒದಗಿಸುವುದು.
- ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ, ಬೆಂಗಳೂರು ಇವರು ಪ್ರತಿ ವಾರಕೊಮ್ಮೆ Aadhar Mandatory Biometric Update (Aadhar MBU) ಉಪನಿರ್ದೇಶಕರೊಂದಿಗೆ ಪ್ರಗತಿ ಪರಿಶೀಲನಾ ಸಭೆಗಳನ್ನು ನಡೆಸುವುದು.
- ಹಿರಿಯ ಸಹಾಯಕ ನಿರ್ದೇಶಕರು, ಇ-ಆಡಳಿತ ವಿಭಾಗ, ಆಯುಕ್ತರ ಕಛೇರಿ, ಶಾಲಾ ಶಿಕ್ಷಣ ಇಲಾಖೆ, ಬೆಂಗಳೂರುರವರನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸುವುದು.




