ಬೆಂಗಳೂರು: ಕಲಬುರಗಿಯಿಂದ ಬೆಂಗಳೂರಿಗೆ ಹೊರಡುವ ವಂದೇ ಭಾರತ್ ರೈಲು ಸಂಚಾರದ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ.
2026ರ ಜನವರಿ 1ರಿಂದ ಕಲಬುರಗಿಯಿಂದ ಬೆಳಗ್ಗೆ 5:15ರ ಬದಲು 55 ನಿಮಿಷ ತಡವಾಗಿ ವಂದೇ ಭಾರತ್ ರೈಲು ಹೊರಡಲಿದ್ದು, ಮಧ್ಯಾಹ್ನ 2.10ಕ್ಕೆ ಬೆಂಗಳೂರಿನ ಬೈಯಪ್ಪನಹಳ್ಳಿಯ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ತಲುಪಲಿದೆ.
ಬೆಂಗಳೂರಿನಿಂದ ಮಧ್ಯಾಹ್ನ ಕಲಬುರಗಿಗೆ ಹೊರಡುವ ವಂದೇ ಭಾರತ್ ರೈಲಿನ ಸಮಯದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಆದರೆ, ಕಲಬುರಗಿಗೆ 45 ನಿಮಿಷ ಬೇಗನೆ ತಲುಪಲಿದೆ. ರಾತ್ರಿ 11:30 ಕಲಬುರಗಿ ತಲುಪುತ್ತಿದ್ದ ರೈಲು ರಾತ್ರಿ 10:45ಕ್ಕೆ ತಲುಪಲಿದೆ. ಪ್ರಯಾಣಿಕರ ಕೋರಿಕೆಯ ಮೇರೆಗೆ ಸತ್ಯಸಾಯಿ ಪ್ರಶಾಂತಿ ನಿಲಯಂನಲ್ಲಿ ವಂದೇ ಭಾರತ್ ರೈಲು ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ.
