BREAKING : ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ‘ಡೀಪ್ ಫೇಕ್ ವೀಡಿಯೋ’ ವೈರಲ್ : ಬೆಂಗಳೂರಲ್ಲಿ ‘FIR’ ದಾಖಲು.!

ನವದೆಹಲಿ : ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಡೀಪ್ ಫೇಕ್ ವೀಡಿಯೋ ವೈರಲ್ ಆಗಿದ್ದು, ಈ ಸಂಬಂಧ ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಿಸಲಾಗಿದೆ.

ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡುವಂತೆ ಮಾತನಾಡುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದನ್ನು ಪರಿಶೀಲಿಸಿದಾಗ ಅದು ಎಐ ಬಳಸಿ ಡೀಪ್ ಫೇಲ್ ವಿಡಿಯೋ ರಚಿಸಲಾಗಿದೆ ಎಂಬುದು ತಿಳಿದು ಬಂದಿದೆ.

ಅಪರಿಚಿತರ ವಿರುದ್ಧ ಮಲ್ಲೇಶ್ವರಂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.

ಡೀಪ್ಫೇಕ್ ಎಂದರೆ ಆಳವಾದ ನಕಲಿ ತಂತ್ರಜ್ಞಾನ ( deepfake technology) ಬಳಸಿ ರಚಿಸಲಾದ ನಕಲಿ ವೀಡಿಯೊಗಳು, ಆಡಿಯೊಗಳು ಅಥವಾ ಚಿತ್ರಗಳು. ಇದು ಒಬ್ಬ ವ್ಯಕ್ತಿಯ ಮುಖ ಅಥವಾ ಧ್ವನಿಯನ್ನು ಇನ್ನೊಬ್ಬ ವ್ಯಕ್ತಿಯ ದೇಹಕ್ಕೆ ಸೇರಿಸಲು ಅಥವಾ ಅವರ ಮುಖಭಾವಗಳನ್ನು ಕುಶಲತೆಯಿಂದ ನಿರ್ವಹಿಸಲು ಆಳವಾದ ಕಲಿಕೆ (deep learning) ತಂತ್ರಜ್ಞಾನವನ್ನು ಬಳಸುತ್ತದೆ. ಈ ತಂತ್ರಜ್ಞಾನವನ್ನು ದುರುಪಯೋಗಪಡಿಸಿಕೊಂಡು ತಪ್ಪು ಮಾಹಿತಿ ಹರಡಬಹುದು, ಮಾನಹಾನಿ ಮಾಡಬಹುದು ಅಥವಾ ವಂಚನೆ ಮಾಡಬಹುದು. ಆಡಿಯೊ ಡೀಪ್ಫೇಕ್ಗಳನ್ನು ಬಳಸಿ ನಕಲಿ ಕರೆಗಳು ಅಥವಾ ಸಂಭಾಷಣೆಗಳನ್ನು ರಚಿಸಬಹುದು. ಇದು ಹಣಕಾಸಿನ ವಂಚನೆಗಳಿಗೆ ಕಾರಣವಾಗಬಹುದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read