ಚಾಮರಾಜನಗರ ಜಿಲ್ಲೆಯಲ್ಲಿ 40 ಕಾಡಾನೆಗಳ ಹಿಂಡು ಪ್ರತ್ಯಕ್ಷವಾಗಿದ್ದು, ಜನ ಕಂಗಾಲಾಗಿ ಹೋಗಿದ್ದಾರೆ. ಕರ್ನಾಟಕ -ತಮಿಳುನಾಡು ಗಡಿಭಾಗದಲ್ಲಿ 40ಕ್ಕೂ ಹೆಚ್ಚು ಕಾಡಾನೆಗಳ ಹಿಂಡು ಕಾಣಿಸಿಕೊಂಡು ಓಡಾಟ ನಡೆಸಿದೆ.
ಒಂದೇ ಬಾರಿಗೆ 40ಕ್ಕೂ ಹೆಚ್ಚು ಕಾಡಾನೆಗಳನ್ನು ಕಂಡು ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಗಡಿಯಲ್ಲಿ ಕಳೆದ ಒಂದು ವಾರದಿಂದ ಆಗಾಗ ಗಜಪಡೆ ಕಾಣಿಸಿಕೊಳ್ಳುತ್ತಿದೆ. ಚಾಮರಾಜನಗರ ಜಿಲ್ಲೆಯ ಗಡಿ ತಮಿಳುನಾಡಿನ ಅರಳವಾಡಿ ಹಾಗೂ ತಾಳವಾಡಿ ಗ್ರಾಮದ ಸಮೀಪ 40ಕ್ಕೂ ಹೆಚ್ಚು ಕಾಡಾನೆಗಳು ಬೀಡು ಬಿಟ್ಟಿವೆ.
ಗಜಪಡೆ ಕಂಡು ಜಮೀನಿಗೆ ತೆರಳಲಾಗದೆ ರೈತರು ಮನೆಯಲ್ಲೇ ಉಳಿದಿದ್ದಾರೆ. ಕಾಡಾನೆಗಳನ್ನು ಕಾಡಿಗೆ ಓಡಿಸುವಂತೆ ಅರಣ್ಯ ಇಲಾಖೆಗೆ ರೈತರು ಮನವಿ ಮಾಡಿದ್ದಾರೆ.
You Might Also Like
TAGGED:ಕಾಡಾನೆ
