ಕೊಡಗು: ಕಾಫಿ ತೋಟದಲ್ಲಿ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದ ಎರಡು ವರ್ಷದ ಮಗುವನ್ನು ಶ್ವಾನವೊಂದು ಪತ್ತೆ ಮಾಡಿರುವ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆಯಲ್ಲಿ ನಡೆದಿದೆ.
ಇಲ್ಲಿನ ಕೊಂಗಣ ಗ್ರಾಮದಲ್ಲಿ ಕಾಫಿ ತೋಟದಲ್ಲಿ ಎರಡು ದಿನಗಳ ಹಿಂದೆ ೨ ವರ್ಷದ ಮಗು ಸುನನ್ಯಾ ನಾಪತ್ತೆಯಾಗಿದ್ದಳು. ಕಾಫಿ ಕೊಯ್ಲು ಕೆಲಸಕ್ಕೆಂದು ಕುಟುಂಬ ಬಂದಿದ್ದಾಗ ಮಕ್ಕಳನ್ನು ಕರೆತಂದಿದ್ದರು. ಪೋಷಕರು ತೋಟದ ಕೆಲಸದಲ್ಲಿ ನಿರತರಾಗಿದ್ದಾಗ ಮಗು ತಪ್ಪಿಸಿಕೊಂಡು ನಾಪತ್ತೆಯಾಗಿದೆ.
ಸ್ಥಳೀಯರು, ಅರಣ್ಯ ಇಲಾಖೆ ಸಿಬ್ಬಂದಿ ಮುಗಿವಿಗಾಗಿ ತೀವ್ರ ಹುಡುಕಾಟ ನಡೆಸಿದ್ದರು. ಎರಡು ದಿನಗಳ ಕಾಲ ಹುಡುಕಿದರೂ ಮಗುವಿನ ಸುಳಿವಿರಲಿಲ್ಲ. ಇಂದು ಕಾಫಿ ತೋಟದ ಮಧ್ಯೆ ಮಗು ಇರುವುದನ್ನು ಶ್ವಾನ ಪತ್ತೆ ಮಾಡಿದೆ. ಸದ್ಯ ಮಗು ಸಿಕ್ಕಿರುವ ಹಿನ್ನೆಲೆಯಲ್ಲಿ ಪೋಷಕರು ನಿಟ್ಟುಸಿರು ಬಿಟ್ಟಿದ್ದಾರೆ.
