BIG NEWS : ‘ರಾಜ್ಯ ಸರ್ಕಾರಿ’ ನೌಕರರೇ ಗಮನಿಸಿ : ನಾಳೆ ವಿಶೇಷ ಉಪನ್ಯಾಸ ಕಾರ್ಯಕ್ರಮ ಆಯೋಜನೆ

ಧಾರವಾಡ : ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ ವತಿಯಿಂದ ಬರುವ ಡಿಸೆಂಬರ್ 2, 2025 ರಂದು ಸಂಜೆ 4 ಗಂಟೆಗೆ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಕೆಜಿಐಡಿ ವಂತಿಗೆ, ಸಾಲ ಸೌಲಭ್ಯಗಳು ಮತ್ತು ಆರ್ಥಿಕ ವಂಚನೆ, ಡಿಜಿಟಲ್ ಅರೆಸ್ಟ್, ಸೈಬರ್ ಅಪರಾಧಗಳ ಕುರಿತು ಹಿರಿಯ ಪೊಲೀಸ ಅಧಿಕಾರಿಗಳಿಂದ ಸರಕಾರಿ ನೌಕರರಿಗೆ ವಿಶೇಷ ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದ್ದಾರೆ.

ಈ ಕುರಿತು ಸುತ್ತೋಲೆ ಹೊರಡಿಸಿ, ಪ್ರಕಟಣೆ ನೀಡಿರುವ ಅವರು, ಜಿಲ್ಲೆಯ ಸರಕಾರಿ ನೌಕರರ ಕರ್ತವ್ಯದ ಸಾಮರ್ಥ್ಯ ಹೆಚ್ಚಿಸಲು ಮತ್ತು ಆರ್ಥಿಕ ವಂಚನೆ, ಮೋಸಗಳಿಂದ ಸುರಕ್ಷಿತವಾಗಿರಲು ಅವರಲ್ಲಿ ಜಾಗೃತಿ ಮೂಡಿಸಲು ವಿಶೇಷ ಉಪನ್ಯಾಸಗಳನ್ನು ಆಯೋಜಿಸಲಾಗುತ್ತಿದೆ ಎಂದು ಹೇಳಿದ್ದಾರೆ.

ಎಲ್ಲ ಸರಕಾರಿ ಅಧಿಕಾರಿಗಳು ಮತ್ತು ನೌಕರರು ಜಿಲ್ಲೆಯ ಸಾರ್ವಜನಿಕರಿಗೆ ಜನಸ್ನೇಹಿ ಆಡಳಿತ ನೀಡುವ ದೃಷ್ಟಿಯಿಂದ, ಸರಕಾರಿ ನೌಕರರನ್ನು ಕೌಶಲ್ಯಭರಿತರು ಮತ್ತು ಹೆಚ್ವು ಜ್ಞಾನಯುಕ್ತರು ಆಗಿ ಮಾಡಲು ಕ್ರಮವಹಿಸಲಾಗುತ್ತಿದೆ. ಅವರು ತಮ್ಮ ಕಚೇರಿ ಕೆಲಸ ಹಾಗೂ ಇಲಾಖೆ ಆಡಳಿತವನ್ನು ಸಮರ್ಪಕವಾಗಿ, ಸಮರ್ಥವಾಗಿ ನಿರ್ವಹಿಸಲು ಅವಕಾಶವಾಗುವಂತೆ ವೃತ್ತಿಕೌಶಲ್ಯ ಭರೀತರನ್ನಾಗಿ ಸಿದ್ದಗೊಳಿಸಲು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ವತಿಯಿಂದ ಪ್ರತಿ ತಿಂಗಳು ವಿಶೇಷ ಉಪನ್ಯಾಸ, ಕಾರ್ಯಾಗಾರ ಹಮ್ಮಿಕೊಳ್ಳಲು ಜಿಲ್ಲಾಡಳಿತದಿಂದ ನಿರ್ಧರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಅದರಂತೆ ದಿನಾಂಕ: 2-12-2025 ರ ಮಂಗಳವಾರ ಸಂಜೆ 4 ಗಂಟೆಗೆ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಸರಕಾರಿ ನೌಕರರ ಕೆಜಿಐಡಿ ವಂತಿಗೆ ಕಡಿತ, ಸಾಲ ಸೌಲಭ್ಯ, ಕೆಜಿಐಡಿ ಆನ್ ಲೈನ್ ಸೇವೆ, ಸೌಲಭ್ಯಗಳ ಬಳಕೆ ಕುರಿತು ಜಿಲ್ಲಾ ವಿಮಾ ಅಧಿಕಾರಿ ಜೆ.ಸಿ.ಕಠಾರಿ ಮತ್ತು ಆರ್ಥಿಕ ವಂಚನೆ, ಡಿಜಿಟಲ್ ಅರೆಸ್ಟ್, ಬ್ಯಾಂಕ್ ಹೆಸರಿನ ಮೊಸದ ಕರೆಗಳು ಹಾಗೂ ಸೈಬರ್ ಅಪರಾಧಗಳ ಕುರಿತು ಧಾರವಾಡ ಸೇನ್ ಪೊಲೀಸ ಠಾಣೆಯ ಡಿವೈಎಸ್ ಪಿ ಹಾಗೂ ಹಿರಿಯ ಪೊಲೀಸ್ ಅಧಿಕಾರಿ ಶಿವಾನಂದ ಕಟಗಿ ಅವರು ವಿಶೇಷ ಉಪನ್ಯಾಸ ನೀಡಲಿದ್ದಾರೆ.ಈ ವಿಶೇಷ ಉಪನ್ಯಾಸ ಕಾರ್ಯಕ್ರಮಕ್ಕೆ ಎಲ್ಲ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು, ಡಿಡಿಓಗಳು,ಇಎಸ್ ಟಿ ವಿಷಯ ನಿರ್ವಾಹಕರು ಹಾಗೂ ಇತರ ನೌಕರರು ಹಾಜರಾಗಲು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಸೂಚಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read