BIG NEWS: ಬಸವ ತತ್ವದ ಕೆಲ ಸ್ವಾಮೀಜಿಗಳು ತಾಲಿಬಾನಿಗಳಿಗೆ ಹೋಲಿಸಿದ ಕಾಡಸಿದ್ದೇಶ್ವರ ಸ್ವಾಮೀಜಿ: ಶ್ರೀಗಳಿಂದ ಮತ್ತೊಂದು ವಿವಾದಾತ್ಮಕ ಹೇಳಿಕೆ

ಬೆಳಗಾವಿ: ಕನ್ಹೇರಿ ಮಠದ ಅದೃಶ್ಯ ಕಡಸಿದ್ದೇಶ್ವರ ಸ್ವಾಮೀಜಿ ಮತ್ತೊಂದು ವಿವಾದ ಸೃಷ್ಟಿಸಿದ್ದಾರೆ. ಬಸವ ತತ್ವದ ಕೆಲ ಸ್ವಾಮೀಜಿಗಳನ್ನು ತಾಲಿಬಾನಿಗಳಿಗೆ ಹೋಲಿಕೆ ಮಾಡಿದ್ದಾರೆ.

ಬೆಳಗಾವಿ ಜಿಲ್ಲೆಯ ರಾಯಬಾಗ ಪಟ್ಟಣದಲ್ಲಿ ನಡೆದ ಹನುಮ ಮಾಲಾ ದೀಕ್ಷಾ ಕಾರ್ಯಕ್ರಮದಲ್ಲಿ ಮಾತನಾಡಿದ ಕಾಡಸಿದ್ದೇಶ್ವರ ಸ್ವಾಮೀಜಿ, ಹನುಮ ಮಾಲೆ ಹಾಕಿಕೊಳ್ಳುವವರು ಯಾವಾಗಲೂ ಯಾರ್ಗೂ ಕೆಟ್ಟದ್ದನ್ನು ಮಾಡುವುದಿಲ್ಲ. ಯಾರನ್ನೂ ತಪು ದಾರಿಗೆ ಕೂಡ ಎಳೆಯುವುದಿಲ್ಲ. ನಮ್ಮಂತ ಬಟ್ಟೆ ಹಾಕಿಕೊಂಡು ಬಸವ ತಾಲಿಬಾನಿಗಳು ನಿಮ್ಮನ್ನು ಟೀಕೆ ಮಾಡಬಹುದು ಎಂದು ಬಸ್ವ ತತ್ವದ ಕೆಲ ಸ್ವಾಮೀಜಿಗಳನ್ನು ಉದ್ದೇಶಿಸಿ ವಾಗ್ದಾಳಿ ನಡೆಸಿದ್ದಾರೆ.

ನಮ್ಮ ಹುಡುಗಿಯರನ್ನು ಎತ್ತಾಕೊಂಡು ಹೋಗ್ತಿದ್ದಾರೆ. ಅಂತವರನ್ನು ಆರತಿ ಬೆಳಗಿ ನಿಮ್ಮನ್ನು ಮನೆಗೆ ಕರೆದುಕೊಂಡು ಬರಬೇಕಾ? ಅವರನ್ನು ಹಿಡಿದುಕೊಂಡು ಬಂದು ಅವರಿಗೆ ತಿಳಿಯುವ ಭಾಷೆಯಲ್ಲಿ ಹೇಲಬೇಕು ಎಂದಿದ್ದಾರೆ.

ಬಸವ ತತ್ವ ಸ್ವಾಮೀಜಿಗಳನ್ನು ತಾಲಿಬಾನಿಗಳಿಗೆ ಹೋಲಿಸಿದ ಕಾಡಸಿದ್ದೇಶ್ವರ ಶ್ರೀಗಳ ಹೇಳಿಕೆ ತೀವ್ರ ಆಕ್ಷೇಪಕ್ಕೆ ಕಾರಣವಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read